", "articleSection": "Government", "image": { "@type": "ImageObject", "url": "https://prod.cdn.publicnext.com/s3fs-public/405356-1738149067-jilllla.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "AnandChitradurga" }, "editor": { "@type": "Person", "name": "Vinayak.Patil" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಚಿತ್ರದುರ್ಗ: ನಾಯಕ ಜಾತಿ ಪ್ರಮಾಣ ಪತ್ರ ಪಡೆಯಲು ಉರ್ತಾಳು ಗ್ರಾಮಸ್ಥರು ಪರದಾಟ ಪಡುತ್ತಿರುವ ದೃಶ್ಯ ಬೆಳಕಿಗೆ ಬಂದಿದೆ. ಜಾತಿ ಪ್ರಮಾಣ ಪತ್ರವಿಲ್ಲ...Read more" } ", "keywords": "Chitradurga, Karnataka Border Area, Marriage Benefits, Government Facilities, Border Residents, Karnataka News, Chitradurga News, Government Schemes, Marriage Incentives,Government", "url": "https://publicnext.com/node" } ಚಿತ್ರದುರ್ಗ: ಕರ್ನಾಟಕ ಗಡಿ ಭಾಗದಲ್ಲಿ ಮದುವೆಯಾದವರಿಗೆ ಸರ್ಕಾರಿ ಸೌಲಭ್ಯವಿಲ್ಲ!- ನಿವಾಸಿಗಳ ಅಳಲು
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿತ್ರದುರ್ಗ: ಕರ್ನಾಟಕ ಗಡಿ ಭಾಗದಲ್ಲಿ ಮದುವೆಯಾದವರಿಗೆ ಸರ್ಕಾರಿ ಸೌಲಭ್ಯವಿಲ್ಲ!- ನಿವಾಸಿಗಳ ಅಳಲು

ಚಿತ್ರದುರ್ಗ: ನಾಯಕ ಜಾತಿ ಪ್ರಮಾಣ ಪತ್ರ ಪಡೆಯಲು ಉರ್ತಾಳು ಗ್ರಾಮಸ್ಥರು ಪರದಾಟ ಪಡುತ್ತಿರುವ ದೃಶ್ಯ ಬೆಳಕಿಗೆ ಬಂದಿದೆ. ಜಾತಿ ಪ್ರಮಾಣ ಪತ್ರವಿಲ್ಲದೆ ಜನರಿಗೆ ಸರ್ಕಾರದ ಗ್ಯಾರಂಟಿ ಯೋಜನೆಗಳು ಸಹ ತಲುಪುವುದು ಕಷ್ಟಕರವಾಗಿದ್ದು ಜಾತಿ ಪ್ರಮಾಣ ಪತ್ರವಿಲ್ಲದೆ ಮಕ್ಕಳ ವಿದ್ಯಾರ್ಥಿ ವೇತನಕ್ಕೂ ಕತ್ತರಿ ಬಿದ್ದು ಪರದಾಟ ಪಡುವಂತಾಗಿದೆ.

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಉರ್ತಾಳು ಗ್ರಾಮದಲ್ಲಿ ಹಲವು ದಶಕಗಳಿಂದ ಹತ್ತಾರು ಕುಟುಂಬಗಳು ಆಂಧ್ರದಲ್ಲಿ ಕರ್ನಾಟಕದ ನಾಯಕ ಸಮುದಾಯಕ್ಕೆ ಸಮಾನವಾದ ಬೋಯ ಸಮುದಾಯದೊಂದಿಗೆ ವಧು ವರರನ್ನು ಕೊಟ್ಟುಕೊಳ್ಳುವ ಸಂಪ್ರದಾಯ ನಡೆದುಕೊಂಡು ಬರುತ್ತಿದೆ.

ಈ ಹಿಂದೆ ಈ ಸಮುದಾಯದ ಹೆಣ್ಣು ಮಕ್ಕಳಿಗೆ ಕರ್ನಾಟಕದಲ್ಲಿ ನಾಯಕ ಜಾತಿ ಪ್ರಮಾಣ ಪತ್ರ ನೀಡಲಾಗಿತ್ತು.

ಆದರೆ ಇತ್ತೀಚಿಗೆ ಆಂಧ್ರದ ಬೋಯ ಸಮುದಾಯದಿಂದ ಮದುವೆ ಮಾಡಿಕೊಂಡು ಬಂದಂತಹ ಹೆಣ್ಣಿಗೆ ಕರ್ನಾಟಕದಲ್ಲಿ ನಾಯಕ ಜಾತಿ ಪ್ರಮಾಣ ಪತ್ರ ನೀಡುತ್ತಿಲ್ಲ. ಇದರಿಂದ ಈ ಗ್ರಾಮದ ಹೆಣ್ಣು ಮಕ್ಕಳ ಕುಟುಂಬದವರಿಗೆ ಜಾತಿ ಪ್ರಮಾಣ ಪತ್ರವಿಲ್ಲದೆ ಅನ್ನಭಾಗ್ಯ, ಗೃಹಲಕ್ಷ್ಮಿ, ಗೃಹಜ್ಯೋತಿ ಸೇರಿದಂತೆ ಗ್ಯಾರಂಟಿ ಯೋಜನೆಗಳ ಸವಲತ್ತುಗಳು ಸಿಗುತ್ತಿಲ್ಲ.

ಅದಲ್ಲದೆ, ಮಕ್ಕಳ ವಿದ್ಯಾಭ್ಯಾಸಕ್ಕೂ ಕೂಡ ಇದು ಮಾರಕವಾಗಿದ್ದು ಈ ಸಂಬಂಧ ಈ ಗ್ರಾಮದ ಜನತೆ ಸುಮಾರು 4 ರಿಂದ 5 ವರ್ಷಗಳಿಂದ ಜಾತಿ ಪ್ರಮಾಣ ಪತ್ರಕ್ಕೆ ನಾಡಕಚೇರಿ, ತಾಲೂಕು ಕಚೇರಿ ಅಲೆಯುತ್ತಿದ್ದರೂ ಫಲಿತಾಂಶ ಮಾತ್ರ ಶೂನ್ಯವಾಗಿದ್ದು ಜಿಲ್ಲಾಡಳಿತ ಅಥವಾ ಸರ್ಕಾರ ಈ ಬಗ್ಗೆ ಗಮನ ಹರಿಸುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.

Edited By : Vinayak Patil
PublicNext

PublicNext

29/01/2025 04:41 pm

Cinque Terre

31.23 K

Cinque Terre

0

ಸಂಬಂಧಿತ ಸುದ್ದಿ