", "articleSection": "Infrastructure,Health & Fitness,Government", "image": { "@type": "ImageObject", "url": "https://prod.cdn.publicnext.com/s3fs-public/418299-1738119551-anarogya.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "ArujunChitradruga" }, "editor": { "@type": "Person", "name": "Ashok.Mullalli" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಚಿತ್ರದುರ್ಗ: ಗ್ಯಾಸ್ ಪೈಪ್ ಲೈನ್ ಅಳವಡಿಸುವ ವೇಳೆ ಡ್ರೈನೇಜ್ ಪೈಪ್ ಒಡೆದು ಕಲುಷಿತ ನೀರು ಮನೆಯ ಮುಂದಿನ ಸಂಪಲ್ಲಿ ಸಂಗ್ರಹವಾಗಿದ್ದು, ಸಾರ್ವಜನಿಕ...Read more" } ", "keywords": "Chitradurga News, Drainage Water Pollution, Gas Pipeline Installation, Karnataka Civic Issues, Public Outrage, Municipal Corruption, Chitradurga City News, Environmental Concerns.,Chitradurga,Infrastructure,Health-and-Fitness,Government", "url": "https://publicnext.com/node" } ಚಿತ್ರದುರ್ಗ: ಸಂಪ್‌ಗೆ ಸೇರಿದ ಡ್ರೈನೇಜ್ ನೀರು…! ಗ್ಯಾಸ್ ಪೈಪ್ ಅಳವಡಿಕೆ ಸಿಬ್ಬಂದಿ ವಿರುದ್ಧ ಆಕ್ರೋಶ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿತ್ರದುರ್ಗ: ಸಂಪ್‌ಗೆ ಸೇರಿದ ಡ್ರೈನೇಜ್ ನೀರು…! ಗ್ಯಾಸ್ ಪೈಪ್ ಅಳವಡಿಕೆ ಸಿಬ್ಬಂದಿ ವಿರುದ್ಧ ಆಕ್ರೋಶ

ಚಿತ್ರದುರ್ಗ: ಗ್ಯಾಸ್ ಪೈಪ್ ಲೈನ್ ಅಳವಡಿಸುವ ವೇಳೆ ಡ್ರೈನೇಜ್ ಪೈಪ್ ಒಡೆದು ಕಲುಷಿತ ನೀರು ಮನೆಯ ಮುಂದಿನ ಸಂಪಲ್ಲಿ ಸಂಗ್ರಹವಾಗಿದ್ದು, ಸಾರ್ವಜನಿಕರು ಗ್ಯಾಸ್ ಪೈಪ್ ಅಳವಡಿಕೆ ಸಿಬ್ಬಂದಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ನಗರದ ಜೋಗಿಮಟ್ಟಿ ರಸ್ತೆಗೆ ಹೊಂದಿಕೊಂಡ ಪ್ರಶಾಂತ ನಗರದಲ್ಲಿ ಮನೆ‌ಮನೆಗೆ LPG ಗ್ಯಾಸ್ ಪೈಪ್ ಸಂಪರ್ಕ ಕಲ್ಪಿಸುವ ಕಾರ್ಯ ನಡೆದಿದೆ. ಈ ವೇಳೆ ಡ್ರೈನೇಜ್ ಪೈಪ್ ಗೆ ಹೊಡೆತ ಬಿದ್ದು, ಪೈಪ್ ಹಾಳಾಗಿದೆ. ಇದರಿಂದ ಕಲುಷಿತ ನೀರು ಭೂಮಿಗೆ ಇಂಗಿದೆ. ಅಕ್ಕ ಪಕ್ಕದ ಮನೆಯ ಅಂಡರ್ ಗ್ರೌಂಡ್ ಟ್ಯಾಂಕ್ ಗೆ ನುಗ್ಗಿದೆ. ಇದರಿಂದ ಮನೆಯ ಸದಸ್ಯರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಸಂಪಲ್ಲಿನ ನೀರು ಜೊಂಡುಗಟ್ಟಿದೆ. ಇದನ್ನು ಬಳಸಿದ ಜನರ ಮೈ ಮೇಲೆ ಬೊಬ್ಬೆ ಕಾಣಿಸಿಕೊಂಡು, ಕೈ ಚರ್ಮ ಸುಲಿಯುತ್ತಿದೆ. ಎಲ್ಲೆಂದರಲ್ಲಿ ಅವೈಜ್ಞಾನಿಕವಾಗಿ ರಸ್ತೆ ಅಗೆದಿದ್ದು, ಸಾರ್ವಜನಿಕರು ಓಡಾಡುವುದು ಕಷ್ಟವಾಗುತ್ತಿದೆ. ನಗರಸಭೆ ಅಧಿಕಾರಿಗಳ ಗಮನಕ್ಕೆ ತಂದ್ರೂ ಯಾವುದೇ ಪ್ರಯೋಜನವಾಗಿಲ್ಲ. ಕೂಡಲೇ ಅನಾಹುತ ಆಗುವ ಮೊದಲೇ ನಗರಸಭೆ ಅಧಿಕಾರಿಗಳು ಈ ಕುರಿತು ಕ್ರಮ ಕೈಗೊಳ್ಳಬೇಕು ಅಂತಾ ಅಧಿಕಾರಿಗಳ ವಿರುದ್ಧ ಬೇಸರ ಹೊರಹಾಕಿದ್ದಾರೆ.

Edited By : Ashok M
PublicNext

PublicNext

29/01/2025 08:29 am

Cinque Terre

26.57 K

Cinque Terre

0