ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಮಾನಸಿಕ - ದೈಹಿಕ ಸದೃಢತೆಗೆ ಕ್ರಿಕೆಟ್‌ ಸಹಕಾರಿ - ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ

ನವಲಗುಂದ : ಕ್ರಿಕೆಟ್‌ ಇಂದಿನ ಯುವ ಪ್ರತಿಭೆಗಳನ್ನು ಅನಾವರಣಗೊಳಿಸುವಲ್ಲಿ ಪ್ರಮುಖ ಕ್ರೀಡೆಯಾಗಿದೆ. ಮಾನಸಿಕ ಮತ್ತು ದೈಹಿಕವಾಗಿ ಪ್ರತಿಯೊಬ್ಬರನ್ನು ಸಧೃಢರನ್ನಾಗಿಸುತ್ತದೆ ಎಂದು ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದರು

ಪಟ್ಟಣದ ಶ್ರೀ ಶಂಕರ ಮಹಾವಿದ್ಯಾಲಯ ಆವರಣದಲ್ಲಿ ನವಲಗುಂದ ಪ್ರಿಮಿಯರ್ ಲೀಗ್ ಸಿಸನ್ 5 ಕ್ರಿಕೆಟ್ ಪಂದ್ಯಾವಳಿಯನ್ನು ಉದ್ಘಾಟಿಸಿ ಚಾಲನೆ ನೀಡಿ ಮಾತನಾಡಿದ ಅವರು ರಾಷ್ಟ್ರದ ಹೃದಯ ಬಡಿತವಾದ ಕ್ರಿಕೆಟ್ ಪ್ರತಿಯೊಬ್ಬ ಭಾರತೀಯನ ರಕ್ತನಾಳಗಳಲ್ಲಿ ಹರಿಯುವ ಆಳವಾದ ಭಾವನೆಗಳನ್ನು ಅನುರಣಿಸುತ್ತದೆ. ಇದು ಉತ್ಸಾಹವನ್ನು ಬೆಳಗಿಸುವುದರ ಜೊತೆಗೆ ಲಕ್ಷಾಂತರ ಜನರನ್ನು ಒಂದುಗೂಡಿಸುವ ಮತ್ತು ಸಮಯದ ಗಡಿಗಳನ್ನು ಮೀರಿ ಬಾಳುವ ಪರಂಪರೆಗಳನ್ನು ಸೃಷ್ಟಿಸುವ ಆಟವಾಗಿದೆ ಎಂದರು.

ಈ ವೇಳೆ ತಾಲೂಕ ಅಧ್ಯಕ್ಷ ಗಂಗಪ್ಪ ಮನಮಿ, ನಿಂಗಪ್ಪ ಬಾರಕೇರ, ಸಿದ್ದನಗೌಡ ಪಾಟೀಲ, ರೋಹನ ಪಾಟೀಲ ಮುನೇನಕೊಪ್ಪ, ಸಾಯಿಬಾಬಾ ಆನೆಗುಂದಿ, ಮಹಾಂತೇಶ ಕಲಾಲ, ವಿನಾಯಕ ದಾಡಿಬಾವಿ, ಚಂದ್ರು ಕುಂದಗೋಳ ಸೇರಿ ಕ್ರೀಡಾಪಟುಗಳು, ಅಭಿಮಾನಿಗಳು ಇದ್ದರು.

Edited By : PublicNext Desk
Kshetra Samachara

Kshetra Samachara

28/01/2025 07:30 pm

Cinque Terre

10.7 K

Cinque Terre

0