", "articleSection": "Nature,Government", "image": { "@type": "ImageObject", "url": "https://prod.cdn.publicnext.com/s3fs-public/405356-1738065969-mara.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Vishwanath" }, "editor": { "@type": "Person", "name": "Vinayak.Patil" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಮಂಗಳೂರು: ನಗರದ ಕದ್ರಿ ಮಲ್ಲಿಕಟ್ಟೆಯಲ್ಲಿ ರಸ್ತೆಗೆ ಬಾಗಿದ್ದ ಒಣಗಿದ ಮರವನ್ನು ತೆರವುಗೊಳಿಸುವಂತೆ ಮನಪಾ, ಜನಪ್ರತಿನಿಧಿಗಳು ಅರಣ್ಯ ಇಲಾಖೆಗೆ ಹಿಡ...Read more" } ", "keywords": "Mangaluru, Protest Against Hazardous Tree, Road Safety, Mangalore News, Karnataka News, Tree Removal, Public Protest, Civic Issues, Municipal Corporation, Mangaluru City Corporation.,Udupi,Mangalore,Nature,Government", "url": "https://publicnext.com/node" } ಮಂಗಳೂರು: ರಸ್ತೆಯಲ್ಲಿ ಅಪಾಯಕಾರಿಯಾಗಿ ಬಾಗಿದ ಮರ ತೆರವಿಗಾಗಿ ಪ್ರತಿಭಟನೆ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ರಸ್ತೆಯಲ್ಲಿ ಅಪಾಯಕಾರಿಯಾಗಿ ಬಾಗಿದ ಮರ ತೆರವಿಗಾಗಿ ಪ್ರತಿಭಟನೆ

ಮಂಗಳೂರು: ನಗರದ ಕದ್ರಿ ಮಲ್ಲಿಕಟ್ಟೆಯಲ್ಲಿ ರಸ್ತೆಗೆ ಬಾಗಿದ್ದ ಒಣಗಿದ ಮರವನ್ನು ತೆರವುಗೊಳಿಸುವಂತೆ ಮನಪಾ, ಜನಪ್ರತಿನಿಧಿಗಳು ಅರಣ್ಯ ಇಲಾಖೆಗೆ ಹಿಡಿಶಾಪ ಹಾಕಿ ಸಾಮಾಜಿಕ ಕಾರ್ಯಕರ್ತರೊಬ್ಬರು ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ಕದ್ರಿ ಮಲ್ಲಿಕಟ್ಟೆಯಲ್ಲಿನ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಮುಂಭಾಗದಲ್ಲಿ ಸಂಪೂರ್ಣ ಒಣಗಿದ ಮರವೊಂದು ರಸ್ತೆಗೆ ಬಾಗಿ ನಿಂತಿದೆ. ಮರ ಬಿದ್ದು ಅನಾಹುತ ಸಂಭವಿಸುವ ಮೊದಲು ಅದನ್ನು ತೆರವುಗೊಳಿಸುವಂತೆ ಮನಪಾ, ಜನಪ್ರತಿನಿಧಿಗಳು, ಅರಣ್ಯ ಇಲಾಖೆಗೆ ಸಾಮಾಜಿಕ ಕಾರ್ಯಕರ್ತ ಜೆರಾರ್ಡ್ ಟವರ್ಸ್ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಆದ್ದರಿಂದ ಮಂಗಳವಾರ ಅವರು ವಿಭಿನ್ನ ಮಾದರಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ವಿಭಿನ್ನ ಪೋಷಾಕು ಧರಿಸಿದ ಜೆರಾರ್ಡ್ ಟವರ್ಸ್, ಮೊದಲಿಗೆ ವ್ಯವಸ್ಥೆಗೆ ಹಿಡಿಶಾಪ ಹಾಕಿದರು. ಬಳಿಕ ಮರದ ಬಳಿ ಹೋಗಿ ಮರವನ್ನು ಮುಟ್ಟಿ ಪ್ರಾರ್ಥಿಸಿ, ಮರದ ಬುಡದಲ್ಲಿ ಕೊಂಚ ಕಾಲ ಕುಳಿತು ತಮ್ಮ ಪ್ರತಿಭಟನೆಯನ್ನು ಅಂತ್ಯಗೊಳಿಸಿದರು. ಓರ್ವ ಸಾಮಾಜಿಕ ಕಾರ್ಯಕರ್ತನ ಕಳಕಳಿಗೆ ಸ್ಪಂದಿಸಿ ಮನಪಾ, ಅರಣ್ಯ ಇಲಾಖೆ ಇತ್ತಕಡೆ ಗಮನಹರಿಸಬೇಕಾಗಿದೆ.

Edited By : Vinayak Patil
PublicNext

PublicNext

28/01/2025 05:36 pm

Cinque Terre

38.94 K

Cinque Terre

0