", "articleSection": "Government", "image": { "@type": "ImageObject", "url": "https://prod.cdn.publicnext.com/s3fs-public/videos/thumbnails/344547_1738049634_output_thumbnail.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SureshChallakere" }, "editor": { "@type": "Person", "name": "9739875729" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಚಳ್ಳಕೆರೆ : ಸ್ಮಶಾನ ಜಾಗ ಅತಿಕ್ರಮಣವನ್ನು ವಿರೋಧಿಸಿ ತಾಲ್ಲೂಕಿನ ದೊಡ್ಡೇರಿ ಗೊಲ್ಲರಹಟ್ಟಿ ಗ್ರಾಮದ ಗ್ರಾಮಸ್ಥರು ತಾಲ್ಲೂಕು ಕಚೇರಿ ಮುಂದೆ ಪ್ರತ...Read more" } ", "keywords": "Villagers protest against graveyard encroachment, demand protection of burial ground, and seek action against encroachers.,Chitradurga,Government", "url": "https://publicnext.com/node" } ಚಳ್ಳಕೆರೆ : ಸ್ಮಶಾನ ಜಾಗ ಅತಿಕ್ರಮಣ ವಿರೋಧಿಸಿ ಗ್ರಾಮಸ್ಥರ ಪ್ರತಿಭಟನೆ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಳ್ಳಕೆರೆ : ಸ್ಮಶಾನ ಜಾಗ ಅತಿಕ್ರಮಣ ವಿರೋಧಿಸಿ ಗ್ರಾಮಸ್ಥರ ಪ್ರತಿಭಟನೆ

ಚಳ್ಳಕೆರೆ : ಸ್ಮಶಾನ ಜಾಗ ಅತಿಕ್ರಮಣವನ್ನು ವಿರೋಧಿಸಿ ತಾಲ್ಲೂಕಿನ ದೊಡ್ಡೇರಿ ಗೊಲ್ಲರಹಟ್ಟಿ ಗ್ರಾಮದ ಗ್ರಾಮಸ್ಥರು ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಗ್ರಾಮ ಪಂಚಾಯಿತಿ ಮಾಜಿ ಸದಸ್ಯೆ ಬಡಕ್ಕ ಮಾತನಾಡಿ, 'ಸ್ಮಶಾನಕ್ಕೆ ಮೀಸಲಿರಿಸಿದ್ದ 12.30 ಎಕರೆ ಪ್ರದೇಶವನ್ನು ಅತಿಕ್ರಮಣ ಮಾಡಿಕೊಂಡು ಅಕ್ರಮ ನಿವೇಶನದ ಜತೆಗೆ ಫಲಾನುಭವಿಗಳ ಹೆಸರಿಗೆ ಖಾತೆಯೂ ಮಾಡಿಸಲಾಗಿದೆ.ಹೀಗಾಗಿ, ಗ್ರಾಮದಲ್ಲಿ ಮೃತಪಟ್ಟವರ ದೇಹ ಹೂಳಲು ಜಾಗ ಇಲ್ಲದಿರುವ ಕಾರಣ ಮೃತದೇಹವನ್ನು ಹಳ್ಳದ ಜಾಗಕ್ಕೆ ಎಸೆಯುವ ಹಾಗೂ ಹೂಳುವ ಪರಿಸ್ಥಿತಿ ನಿರ್ಮಾಣವಾಗಿದೆ' ಎಂದು ಬೇಸರ ವ್ಯಕ್ತಪಡಿಸಿದರು.

ಗ್ರಾಮದ ಮುಖಂಡ ಈರಣ್ಣ ಮಾತನಾಡಿ, 'ಗೊಲ್ಲರಹಟ್ಟಿಯ ಜನರು ಅಮಾಯಕರು. ಅವರಿಗೆ ಏನೂ ತಿಳಿಯುವುದಿಲ್ಲ ಎಂದು ನೂರಾರು ವರ್ಷಗಳಿಂದ ಮೃತದೇಹ ಹೂಳಿಕೊಂಡು ಬರುತ್ತಿದ್ದ ಜಾಗವನ್ನು ಕಬಳಿಸಿದ್ದಾರೆ. ಅಕ್ರಮ ನಿವೇಶನ ಮಾಡಿ ತಮಗೆ ಬೇಕಾದವರ ಹೆಸರಿಗೆ ಬರೆಯಿಸಿಕೊಂಡಿದ್ದಾರೆ. ನ್ಯಾಯ ಕೇಳಲು ಹೋದರೆ ನಮ್ಮ ಮೇಲೆ ದೌರ್ಜನ್ಯ ನಡೆಸುತ್ತಾರೆ. ಸ್ಮಶಾನ ಜಾಗ ಅತಿಕ್ರಮಣವನ್ನು ಕೂಡಲೇ ತಡೆಯಬೇಕು' ಎಂದು ಅಧಿಕಾರಿಗಳಲ್ಲಿ ಮನವಿ ಮಾಡಿದರು.

Edited By : PublicNext Desk
PublicNext

PublicNext

28/01/2025 01:03 pm

Cinque Terre

33.86 K

Cinque Terre

0

ಸಂಬಂಧಿತ ಸುದ್ದಿ