ಚಳ್ಳಕೆರೆ: ವಿದ್ಯುತ್ ಕಣ್ಣ ಮುಚ್ಚಾಲೆಯಿಂದ ಬೇಸತ್ತ ತಳಕು ಬೆಸ್ಕಾಂ ಕಚೇರಿಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಮುತ್ತಿಗೆ ಹಾಕಿದರು. ಈ ವೇಳೆ ಮಾತನಾಡಿದ ರೈತ ಮುಖಂಡ ಆರ್ ಬಿ ನಿಜಲಿಂಗಪ್ಪ ಹಿರೇಹಳ್ಳಿ ಬೆಸ್ಕಾಂ ಕಛೇರಿ ವ್ಯಾಪ್ತಿಯಲ್ಲಿ ಕೃಷಿ ಪಂಪ್ ಸೆಟ್ ಗಳಿಗೆ ಹಗಲಿನಲ್ಲಿ ಒಂದು ಗಂಟೆಯೂ ವಿದ್ಯುತ್ ಸರಬರಾಜು ಆಗುತ್ತಿಲ್ಲ ಬೆಳೆಗಳು ಒಣಗುತ್ತಿದ್ದು ಹಗಲು ವಿದ್ಯುತ್ ಸರಬರಾಜು ಮಾಡುಬೇಕು. ರೈತರ ಬೆಳೆ ಉಳಿಸಬೇಕು ಎಂದು ಒತ್ತಾಯಿಸಿದರು. ನಡೆ ಇದಕ್ಕೆ ಉತ್ತರಿಸಿದ ತಳಕ ಎಇಇ ಮಮತಾ ತಾಂತ್ರಿಕ ಕಾರಣಗಳಿಂದ ವಿದ್ಯುತ್ ಅಡೆಚಣೆಯಾಗಿದ್ದು ಇನ್ನು ಎರಡು ದಿನಗಳಲ್ಲಿ ಹಗಲು ವಿದ್ಯುತ್ ಪೂರೈಸುತ್ತೇವೆ ಎಂದು ಭರವಸೆ ನೀಡಿದರು.
Kshetra Samachara
27/01/2025 06:39 pm