ಹಾವೇರಿ: ಬಿಗ್ ಬಾಸ್ ಸೀಸನ್ 11ರ ವಿನ್ನರ್ ಹನುಮಂತನ ಅವರ ಹಾವೇರಿ ಜಿಲ್ಲೆ ಸವಣೂರು ತಾಲೂಕು ಚಿಲ್ಲೂರು ಬಡ್ನಿಯ ಮನೆಯಲ್ಲಿ ಸೂತಕ ಛಾಯೆ ಆವರಿಸಿದೆ. ಕಳೆದ ರಾತ್ರಿ ಹನುಮಂತ ವಿನ್ನರ್ ಎಂದು ಘೋಷಿಸುವ ಮೊದಲೇ ಅವರ ಚಿಕ್ಕಪ್ಪ ದೇವಪ್ಪ ನಿಧನರಾಗಿದ್ದಾರೆ. ಅವರ ಅಂತ್ಯಕ್ರಿಯೆ ಮುಗಿದಿದ್ದು ಹನುಮಂತನ ಮನೆಯಲ್ಲಿ ಯಾವುದೇ ಸಂಭ್ರಮಾಚರಣೆ ಇಲ್ಲ. ಹನುಮಂತನ ನೋಡಲು ಊರಿಗೆ ಆಗಮಿಸತ್ತಿರುವ ಅಭಿಮಾನಿಗಳಲ್ಲಿ ನಿರಾಸೆ ಮನೆಮಾಡಿದೆ.
ನಿನ್ನೆ ಹನುಮಂತನ ಚಿಕ್ಕಪ್ಪ ದೇವಪ್ಪ ನಿಧನ ಹಿನ್ನೆಲೆಯಲ್ಲಿ ಹನುಮಂತ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ. ಮನೆಯಲ್ಲಿ ಹನುಮಂತನ ಮಾವ ಮತ್ತು ಅತ್ತಿಗೆ ಮಾತ್ರವಿದ್ದು ಯಾವುದೇ ಸಂಭ್ರಮಾಚರಣೆ ಇಲ್ಲ. ಸೂತಕದ ಛಾಯೆ ಮುಗಿಯುವವರೆಗೆ ಯಾವುದೇ ಸಂಭ್ರಮಾಚರಣೆ ಮಾಡದಿರಲು ಹನುಮಂತನ ಸಂಬಂಧಿಕರು ನಿರ್ಧರಿಸಿದ್ದಾರೆ. ಮೂರು ದಿನದ ಕಾರ್ಯ ಮುಗಿದ ನಂತರ ಸಂಭ್ರಮಾಚರಣೆ ಮಾಡಲು ನಿರ್ಧಾರ ಮಾಡಲಾಗಿದೆ.
PublicNext
27/01/2025 04:16 pm