ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನನ್ನ ಗುರುಗಳ ಆದೇಶದಂತೆ ಮಹಾಮಂಡಲೇಶ್ವರಳಾದೆ - ಬಾಲಿವುಡ್‌ನ ಮಾಜಿ ಹಾಟ್ ನಟಿ

ಲಕ್ನೋ: ನನ್ನ ಗುರುಗಳ ಆದೇಶದಂತೆ ಮಹಾಮಂಡಲೇಶ್ವರಳಾದೆ ಎಂದು ಬಾಲಿವುಡ್‌ನ ಮಾಜಿ ಹಾಟ್ ನಟಿ ರೂಪದರ್ಶಿ ಮಮತಾ ಕುಲಕರ್ಣಿ ಹೇಳಿದ್ದಾರೆ.

52 ವರ್ಷ ವಯಸ್ಸಿನ ಮಮತಾ ಕುಲಕರ್ಣಿ ಅವರು ಶುಕ್ರವಾರ ಸನ್ಯಾಸತ್ವ ಸ್ವೀಕರಿಸಿದ್ದಾರೆ. ಇನ್ನು ಮುಂದೆ ಅವರು ‘ಯಾಮೈ ಮಮತಾ ನಂದಗಿರಿ’ ಹೆಸರಿನಿಂದ ಗುರುತಿಸಿಕೊಳ್ಳುವರು. ಕನ್ನಡದ ‘ವಿಷ್ಣುವಿಜಯ’ ಸೇರಿದಂತೆ ಹಲವು ಹಿಂದಿ, ತೆಲುಗು, ಮಲಯಾಳಂ, ತಮಿಳು ಸಿನಿಮಾಗಳಲ್ಲಿ ನಟಿಸಿದ್ದ, 90ರ ದಶಕದಲ್ಲಿ ಹಾಟ್ ನಟಿಯಾಗಿ ಗುರುತಿಸಿಕೊಂಡಿದ್ದ ಮಮತಾ ಕುಲಕರ್ಣಿ ಈಗ ಸಾಧ್ವಿ ಆಗಿದ್ದಾರೆ. ಅವರು ಕಿನ್ನರ ಅಖಾಡದ ಮಹಾಮಂಡಲೇಶ್ವರಿ ಆಗಿ ನೇಮಕ ಆಗಿದ್ದಾರೆ. ಕಿನ್ನರ ಅಖಾಡ ಅಥವಾ ಕಿನ್ನರ ಅಖಾರ ಧಾರ್ಮಿಕ ಆಚರಣೆಗಳಲ್ಲಿ ತೊಡಗಿಕೊಂಡಿರುವ ತೃತೀಯ ಲಿಂಗಿಗಳ ಸಂಘವಾಗಿದೆ.

Edited By : Vijay Kumar
PublicNext

PublicNext

24/01/2025 10:41 pm

Cinque Terre

31.08 K

Cinque Terre

0