ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೇಬಿ ಬಂಪ್ ಫೋಟೋ ಹಂಚಿಕೊಂಡ ಆ್ಯಮಿ ಜಾಕ್ಸನ್

ಬ್ರಿಟಿಷ್ ನಟಿ ಆ್ಯಮಿ ಜಾಕ್ಸನ್ ಎರಡನೇ ಬಾರಿಗೆ ಗರ್ಭಿಣಿಯಾಗಿದ್ದಾರೆ. 'ದಿ ವಿಲನ್' ಸಿನಿಮಾದ ಮೂಲಕ ಕನ್ನಡ ಪ್ರೇಕ್ಷಕರಿಗೆ ಪರಿಚಯವಾದ ಅವರು, ನಟ ಎಡ್ ವೆಸ್ಟ್‌ವಿಕ್ ಅವರನ್ನು ವಿವಾಹವಾದರು. ಸದ್ಯ ನಟಿ ಆಮಿ ಜಾಕ್ಸನ್, ಇನ್ಸಾಗ್ರಾಮ್ ನಲ್ಲಿ ಬಿಕಿನಿಯಲ್ಲಿರುವ ತನ್ನ ಬೇಬಿ ಬಂಪ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಬಿಕಿನಿಯಲ್ಲಿರುವ ಅವರ ಫೋಟೋಗಳಿಗೆ ಕೆಲವರು ಟೀಕಿಸಿದ್ದಾರೆ.

ಅಂದಹಾಗೆ, 2015ರಲ್ಲಿ ಉದ್ಯಮಿ ಜಾರ್ಜ್ ಜೊತೆ ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದರು. ಇಬ್ಬರ ಪ್ರೀತಿಗೆ ಮಗುವೊಂದು ಸಾಕ್ಷಿಯಾಗಿತ್ತು. ಆದರೆ ಕೆಲ ಮನಸ್ತಾಪಗಳಿಂದ 2021ರಲ್ಲಿ ಅವರೊಂದಿಗೆ ನಟಿ ಬ್ರೇಕಪ್ ಮಾಡಿಕೊಂಡಿದ್ದರು. ಇದೀಗ ಗಂಡು ಮಗನನ್ನು ನಟಿಯೇ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಾರೆ. ಇನ್ನೂ ಎಡ್ ವೆಸ್ಟ್‌ವಿಕ್ ಜೊತೆ ದಾಂಪತ್ಯ ಜೀವನದಲ್ಲಿ ಖುಷಿಯಾಗಿರುವ ನಟಿ ಮಗುವೊಂದು ಆಗಮಿಸುತ್ತಿರುವ ಖುಷಿಯಲ್ಲಿದ್ದಾರೆ.

Edited By : Nirmala Aralikatti
PublicNext

PublicNext

24/01/2025 06:29 pm

Cinque Terre

19.89 K

Cinque Terre

5