", "articleSection": "Health & Fitness,Crime,Law and Order", "image": { "@type": "ImageObject", "url": "https://prod.cdn.publicnext.com/s3fs-public/229640-1737733155-bngauto.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SrinivasCrimeBng" }, "editor": { "@type": "Person", "name": "hdmanju" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು: ನಿರಂತರವಾಗಿ ಹಾರ್ನ್ ಮಾಡಿ ಸಂದೇಶ ರವಾನಿಸಿದರೂ ಆಂಬ್ಯುಲೆನ್ಸ್‌ಗೆ ದಾರಿ ಬಿಡದೆ ಮೊಂಡಾಟ ತೋರಿದ ಆಟೋ ಚಾಲಕನನ್ನ ಬೆಳ್ಳಂದೂರು ಸಂಚಾರ ...Read more" } ", "keywords": "Bengaluru, Ambulance, Auto Driver Arrest, Traffic Offence, Bangalore Traffic, Karnataka News, Road Safety Rules, Emergency Vehicle Access, Ambulance Blocked, Auto Driver Detained.,Bangalore,Bangalore-Rural,Health-and-Fitness,Crime,Law-and-Order", "url": "https://publicnext.com/node" }
ಬೆಂಗಳೂರು: ನಿರಂತರವಾಗಿ ಹಾರ್ನ್ ಮಾಡಿ ಸಂದೇಶ ರವಾನಿಸಿದರೂ ಆಂಬ್ಯುಲೆನ್ಸ್‌ಗೆ ದಾರಿ ಬಿಡದೆ ಮೊಂಡಾಟ ತೋರಿದ ಆಟೋ ಚಾಲಕನನ್ನ ಬೆಳ್ಳಂದೂರು ಸಂಚಾರ ಠಾಣೆ ಪೊಲೀಸರು ಬಂಧಿಸಿ ಠಾಣಾ ಜಾಮೀನಿನ ಮೇರೆಗೆ ಬಿಡುಗಡೆ ಮಾಡಿದ್ದಾರೆ.
ಪರಮೇಶ್ ಬಂಧಿತ ಆಟೋ ಚಾಲಕ. ಕೂಡ್ಲುನಲ್ಲಿ ವಾಸವಾಗಿರುವ ಈತ ನೆರೆಮನೆಯ ವ್ಯಕ್ತಿಯೋರ್ವರಿಂದ ಆಟೋ ಪಡೆದು ಜನವರಿ 21ರಂದು ಹರಳೂರು ಮಾರ್ಗವಾಗಿ ಆಟೋ ಚಲಾಯಿಸುತ್ತಿದ್ದ. ಈ ವೇಳೆ ಹಿಂಬದಿಯಿಂದ ಸೈರನ್ ಹಾಕಿದ ಆಂಬ್ಯುಲೆನ್ಸ್ ಬಂದರೂ ಚಾಲಕ ದಾರಿ ಬಿಟ್ಟಿರಲಿಲ್ಲ. ತುರ್ತಾಗಿ ಆಸ್ಪತ್ರೆಗೆ ಹೋಗಬೇಕಾಗಿದ್ದರಿಂದ ದಾರಿ ಮಾಡಿಕೊಡುವಂತೆ ವಾಯ್ಸ್ ಸಂದೇಶ ಮೂಲಕ ತಿಳಿಸಿದರೂ ಕ್ಯಾರೆ ಅನ್ನದೇ ಆಟೋ ಚಾಲನೆ ಮುಂದುವರೆಸಿದ್ದ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಗಮನಿಸಿದ ಬೆಳ್ಳಂದೂರು ಟ್ರಾಫಿಕ್ ಪೊಲೀಸರು ಆಟೋ ನೋಂದಣಿ ಸಂಖ್ಯೆ ಆಧರಿಸಿ ಚಾಲಕನನ್ನ ಬಂಧಿಸಿ ಠಾಣಾ ಜಾಮೀನಿನ ಮೇರೆಗೆ ಬಿಡುಗಡೆ ಮಾಡಿದ್ದಾರೆ. ಅಲ್ಲದೆ ಲೈಸೆನ್ಸ್ ರದ್ದು ಕೋರಿ ಆರ್‌ಟಿಓ ಶಿಫಾರಸು ಮಾಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
49 ವರ್ಷದ ಆಟೋ ಚಾಲಕ ಪರಮೇಶ್, ನನಗೆ ಬಿಪಿ, ಶುಗರ್ ಯಿದ್ದು ಹಿಂಬದಿಯಿಂದ ಆಂಬ್ಯುಲೆನ್ಸ್ ಬರುತ್ತಿರುವುದು ಗೊತ್ತಾಗಿರಲಿಲ್ಲ ಎಂದು ಪೊಲೀಸರ ಮುಂದೆ ಚಾಲಕ ಸಮಜಾಯಿಷಿ ನೀಡಿರುವುದಾಗಿ ತಿಳಿದುಬಂದಿದೆ.
PublicNext
24/01/2025 09:09 pm