", "articleSection": "Politics,Infrastructure,Crime,Law and Order,News,Public News,LadiesCorner", "image": { "@type": "ImageObject", "url": "https://prod.cdn.publicnext.com/s3fs-public/421698-1737730287-V6~1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Padmashree" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಬೆಂಗಳೂರು: ಶಾಸಕ ಮುನಿರತ್ನ ಕೂಲಿ ಕೆಲಸ ಮಾಡುವ ನಮ್ಮ ಮನೆಗಳನ್ನು ಧ್ವಂಸ ಮಾಡಿಸಿದ್ದಾರೆ ಹಾಗೂ ಹೆಣ್ಣುಮಕ್ಕಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸ...Read more" } ", "keywords": "MLA Munirathna attack, Munirathna egg attack, acid-laced eggs attack, Karnataka MLA attack, BJP MLA Munirathna, Munirathna slam attack, Karnataka news, Bengaluru crime, politician attack, egg attack on MLA, acid attack on politician.,Bangalore,Bangalore-Rural,Politics,Infrastructure,Crime,Law-and-Order,News,Public-News,LadiesCorner", "url": "https://publicnext.com/node" }
ಬೆಂಗಳೂರು: ಶಾಸಕ ಮುನಿರತ್ನ ಕೂಲಿ ಕೆಲಸ ಮಾಡುವ ನಮ್ಮ ಮನೆಗಳನ್ನು ಧ್ವಂಸ ಮಾಡಿಸಿದ್ದಾರೆ ಹಾಗೂ ಹೆಣ್ಣುಮಕ್ಕಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಪೀಣ್ಯದ ಅಕ್ಕಮಹಾದೇವಿ ಸ್ಲಂ ನಿವಾಸಿಗಳು ಆರೋಪ ಮಾಡುತ್ತಿದ್ದಾರೆ.
ಹೌದು, ಕಳೆದ 20 ವರ್ಷಗಳಿಂದ ಪೀಣ್ಯ ಅಕ್ಕಮಹಾದೇವಿ ಸ್ಲಂ ನಲ್ಲಿ ಹಲವು ಬಡ ಕೂಲಿ ಕಾರ್ಮಿಕರು ವಾಸವಾಗಿದ್ರು. ಆದರೆ, ಏಕಏಕಿ 2 ಜೆಸಿಬಿಯೊಂದಿಗೆ ಸ್ಥಳಕ್ಕೆ ಬಂದ ಮುನಿರತ್ನ ಪಟಾಲಂ 150ಕ್ಕೂ ಹೆಚ್ಚು ಮನೆಗಳನ್ನು ಧ್ವಂಸ ಮಾಡಿದ್ದಾರೆ. ಮನೆಗಳಲ್ಲಿ ಯಾರೂ ಇಲ್ಲದ ಸಮಯ ನೋಡಿ ಮನೆಗಳನ್ನು ಕೆಡವಿದ್ದಾರೆ ಎಂದು ಅಕ್ಕಮಹಾದೇವಿ ಸ್ಲಮ್ ನಿವಾಸಿಗಳು ಶಾಸಕ ಮುನಿರತ್ನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರ್ಕಾರಿ ಜಾಗವನ್ನು ತನ್ನ ಜಾಗ ಅಂತ ಹೇಳಿ ಅಕ್ಕಮಹಾದೇವಿ ಸ್ಲಂ ನಿವಾಸಿಗಳ ಮೇಲೆ ಶಾಸಕ ಮುನಿರತ್ನ ಕ್ರೌರ್ಯ ಮೆರೆದಿದ್ದಾರೆ. ಅಷ್ಟೇ ಅಲ್ಲದೆ, ಅಲ್ಲಿದ್ದ ಹೆಣ್ಣುಮಕ್ಕಳಿಗೆ ಅವಾಚ್ಯ ಪದಗಳಿಂದ ನಿಂದಿಸಿದ್ದು, ನಿವಾಸಿಗಳು ಮುನಿರತ್ನ ವಿರುದ್ಧ ದೂರು ದಾಖಲು ಮಾಡಿ ರೋಷ ವ್ಯಕ್ತಪಡಿಸುತ್ತಿದ್ದಾರೆ.
PublicNext
24/01/2025 08:21 pm