ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: "ಆಸ್ಪತ್ರೆಯಲ್ಲಿ ಹೆಬ್ಬಾಳ್ಕರ್ ಅಡ್ಮಿಟ್ ಆಗಿದ್ರೂ ಬಿಜೆಪಿ ರಾಜಕೀಯ ಮಾಡ್ತಿರೋದು ಶೋಭೆ ತರೋದಿಲ್ಲ"

ಬೆಂಗಳೂರು: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕಾರು ಅಪಘಾತದ ಬಗ್ಗೆ ಹಲವು ಅನುಮಾನ ವ್ಯಕ್ತಪಡಿಸಿದ್ದ ಛಲವಾದಿ ನಾರಾಯಣಸ್ವಾಮಿ ಆರೋಪಕ್ಕೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸಹೋದರ ಚನ್ನರಾಜ್ ಹಟ್ಟಿಹೊಳಿ ಸ್ಪಷ್ಟನೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಗೃಹ ಸಚಿವರನ್ನ ಭೇಟಿಯಾದ ಬಳಿಕ ಮಾತನಾಡಿದ ಅವರು, ಛಲವಾದಿ ನಾರಾಯಣಸ್ವಾಮಿ ಪರಿಷತ್ ನಲ್ಲಿ ಪ್ರತಿಪಕ್ಷ ನಾಯಕರು. ಅವರ ಮೇಲೆ ಗೌರವವಿತ್ತು. ಆದ್ರೆ, ಅಪಘಾತದಲ್ಲಿ ಹೆಬ್ಬಾಳ್ಕರ್ ಆಸ್ಪತ್ರೆಯಲ್ಲಿರುವಾಗ ಇವರು ರಾಜಕೀಯ ಆರೋಪ ಮಾಡ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಛಲವಾದಿಯವರು ಯಾರದ್ದೋ ಮಾತು ಕೇಳಿ ಸುಳ್ಳು ಆರೋಪ ಮಾಡ್ತಿದ್ದಾರೆ, ಅವರ ಆಂತರಿಕ ಕಚ್ಚಾಟಗಳು ಹೆಚ್ಚಿವೆ, ಇದಕ್ಕಾಗಿ ಹೀಗೆ ಆರೋಪ ಮಾಡ್ತಿದ್ದಾರೆ ಎಂದರು.

ನಾವು ಪ್ರಯಾಣ ಮಾಡಿದ್ದು ಸರ್ಕಾರಿ ವಾಹನದಲ್ಲೇ. ಸರ್ಕಾರಿ ಚಾಲಕ,ಸರ್ಕಾರಿ ಗನ್ ಮ್ಯಾನ್ ಇದ್ರು. ನಾವು ನಾಲ್ಕು ಜನ ಕಾರಿನಲ್ಲಿ ಇದ್ದೆವು. ವೈಯಕ್ತಿಕ ಕಾರ್ಯಕ್ರಮಕ್ಕೆ ಹೋಗಿದ್ದರಿಂದ ಎಸ್ಕಾರ್ಟ್ ಕೊಂಡೊಯ್ದಿರಲಿಲ್ಲ. ಖಾಸಗಿ ಕಾರ್ಯಕ್ರಮವಾಗಿದ್ದರಿಂದ ಟಿಪಿ ಹಾಕಿರಲಿಲ್ಲ . ಅಪಘಾತವಾದ ಬಳಿಕ ಅಕ್ಕ ಅವರನ್ನ ಆಸ್ಪತ್ರೆಗೆ ಕರೆದುಕೊಂಡು ಹೋಗುವ ತವಕದಲ್ಲಿ ಇದ್ದೆವು.

ಅದು ಬಿಟ್ಟರೆ ಅಲ್ಲಿ ಏನೋ ಮರೆಮಾಚುತ್ತಿದ್ದೆವು. ಅನ್ನೋದೆಲ್ಲ ಸುಳ್ಳು, ನಾನೇ ಕಿತ್ತೂರು ಇನ್ ಸ್ಪೆಕ್ಟರ್ ಗೆ ಫೋನ್ ಮಾಡಿ ಅಪಘಾತವಾಗಿದೆ ಎಂದು ತಿಳಿಸಿದೆ. ಅಪಘಾತದಲ್ಲಿ ಯಾವ ಪೂರ್ವನಿಯೋಜಿತ ಕೃತ್ಯವೂ ಇಲ್ಲ. ಕಾರಿನಲ್ಲಿ ಯಾವುದೇ ಹಣ ಸಾಗಾಟ ಮಾಡುತ್ತಿರಲಿಲ್ಲ ಎಂದು ಸ್ಪಷ್ಟನೆ ನೀಡಿದರು.

Edited By : Manjunath H D
PublicNext

PublicNext

23/01/2025 10:59 pm

Cinque Terre

45.04 K

Cinque Terre

6

ಸಂಬಂಧಿತ ಸುದ್ದಿ