", "articleSection": "Sports", "image": { "@type": "ImageObject", "url": "https://prod.cdn.publicnext.com/s3fs-public/222042-1737628383-Add-a-heading---2025-01-23T160241.294.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "Vijay.Kumar" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಲಂಡನ್: ಬ್ರಿಟನ್‌ನ ಮಾಜಿ ಪ್ರಧಾನಿ ರಿಷಿ ಸುನಕ್ ಅವರು ಯುಕೆಯ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮತ್ತು ಅಮೆರಿಕದ ಸ್ಟ್ಯಾನ್‌ಫೋರ್ಡ್ ವಿಶ್ವವಿದ್...Read more" } ", "keywords": "Rishi Sunak, Oxford University, Stanford University, UK Prime Minister, former PM, university roles, academic appointments, politics, education news. ,,Sports", "url": "https://publicnext.com/node" } ಕಾಲೇಜುಗಳಲ್ಲಿ ಹೊಸ ವೃತ್ತಿಜೀವನ ಆರಂಭಕ್ಕೆ ಯುಕೆ ಮಾಜಿ ಪ್ರಧಾನಿ ರಿಷಿ ಸುನಕ್ ನಿರ್ಧಾರ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಲೇಜುಗಳಲ್ಲಿ ಹೊಸ ವೃತ್ತಿಜೀವನ ಆರಂಭಕ್ಕೆ ಯುಕೆ ಮಾಜಿ ಪ್ರಧಾನಿ ರಿಷಿ ಸುನಕ್ ನಿರ್ಧಾರ

ಲಂಡನ್: ಬ್ರಿಟನ್‌ನ ಮಾಜಿ ಪ್ರಧಾನಿ ರಿಷಿ ಸುನಕ್ ಅವರು ಯುಕೆಯ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮತ್ತು ಅಮೆರಿಕದ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯಗಳಲ್ಲಿ ಹೊಸ ಶೈಕ್ಷಣಿಕ ಪಾತ್ರಗಳನ್ನು ವಹಿಸಿಕೊಳ್ಳಲಿದ್ದಾರೆ.

ಹೌದು. 44 ವರ್ಷದ ಸುನಕ್ ಅವರು ಆಕ್ಸ್‌ಫರ್ಡ್‌ನ ಬ್ಲಾವಟ್ನಿಕ್ ಸ್ಕೂಲ್ ಆಫ್ ಗವರ್ನಮೆಂಟ್ ಮತ್ತು ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದ ಹೂವರ್ ಇನ್‌ಸ್ಟಿಟ್ಯೂಷನ್‌ಗೆ ಸೇರುವ ಮೂಲಕ ಹೊಸ ವೃತ್ತಿಜೀವನದ ಮಹತ್ವದ ಹೆಜ್ಜೆಗಳನ್ನು ಇಡುವುದಾಗಿ ಘೋಷಿಸಿದ್ದಾರೆ.

ರಿಷಿ ಸುನಕ್ ತಾವು ಈ ಹಿಂದೆ ಅಧ್ಯಯನ ಮಾಡಿದ್ದ ಆಕ್ಸ್​ಫರ್ಡ್​ ಮತ್ತು ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯಗಳ ವಿಶಿಷ್ಟ ಫೆಲೋಶಿಪ್ ಕಾರ್ಯಕ್ರಮಗಳ ಭಾಗವಾಗಿ ಭಾಗವಹಿಸಲಿದ್ದಾರೆ. ಇದು ಪ್ರಧಾನ ಮಂತ್ರಿ ಸ್ಥಾನದಿಂದ ಕೆಳಗಿಳಿದ ನಂತರ ಅವರ ಹೊಸ ಅಧ್ಯಾಯವನ್ನು ಸೂಚಿಸುತ್ತದೆ. ರಿಷಿ ಸುನಕ್ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಬ್ಲಾವಟ್ನಿಕ್ ಸ್ಕೂಲ್ ಆಫ್ ಗವರ್ನಮೆಂಟ್ ಅನ್ನು ಅದರ ವರ್ಲ್ಡ್ ಲೀಡರ್ಸ್ ಸರ್ಕಲ್‌ನ ಸದಸ್ಯರಾಗಿ ಸೇರುತ್ತಾರೆ. ಅವರು ಕ್ಯಾಲಿಫೋರ್ನಿಯಾದ ಸ್ಟ್ಯಾನ್‌ಫೋರ್ಡ್‌ನ ಹೂವರ್ ಇನ್‌ಸ್ಟಿಟ್ಯೂಷನ್‌ನಲ್ಲಿ ಡಿಸ್ಟಿಂಗ್ವಿಶ್ಡ್ ವಿಸಿಟಿಂಗ್ ಫೆಲೋ ಆಗಲಿದ್ದಾರೆ. ಎರಡೂ ಹುದ್ದೆಗಳನ್ನು ನಿರ್ವಹಿಸಿದರೂ ರಿಷಿ ಸುನಕ್ ಸಂಬಳವನ್ನು ಪಡೆಯುವುದಿಲ್ಲ. ಸ್ಟ್ಯಾನ್‌ಫೋರ್ಡ್ ಅವರ ವೆಚ್ಚಗಳನ್ನು ಭರಿಸುತ್ತದೆ.

ಈ ಮೂಲಕ ರಿಷಿ ಸುನಕ್ ಯುಕೆ ಮತ್ತು ಯುಎಸ್‌ನಲ್ಲಿ ಎರಡು ಹೊಸ ಹುದ್ದೆಗಳನ್ನು ವಹಿಸಿಕೊಳ್ಳುವ ಮೂಲಕ ತಮ್ಮ ಅಲ್ಮಾ ಮೇಟರ್‌ಗೆ ಮರಳಲಿದ್ದಾರೆ. ಯುಕೆ ಮಾಜಿ ಪ್ರಧಾನಿ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಬ್ಲಾವಟ್ನಿಕ್ ಸ್ಕೂಲ್ ಆಫ್ ಗವರ್ನಮೆಂಟ್‌ಗೆ ಅದರ ವರ್ಲ್ಡ್ ಲೀಡರ್ಸ್ ಸರ್ಕಲ್‌ನ ಭಾಗವಾಗಿ ಸೇರುವುದಾಗಿ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿ ಬಹಿರಂಗಪಡಿಸಿದ್ದಾರೆ.

Edited By : Vijay Kumar
PublicNext

PublicNext

23/01/2025 04:04 pm

Cinque Terre

67.93 K

Cinque Terre

0

ಸಂಬಂಧಿತ ಸುದ್ದಿ