", "articleSection": "Politics,News,Public News", "image": { "@type": "ImageObject", "url": "https://prod.cdn.publicnext.com/s3fs-public/421698-1737628286-v7~1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PanduVijayanagar" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಕೂಡ್ಲಿಗಿ : ಸತತ ಸೋಲಿನಿಂದ ಕಂಗೆಟ್ಟಿರುವ ಶ್ರೀರಾಮುಲುಗೆ ಮತ್ತೊಂದ್ ಬಿಗ್ ಶಾಕ್ ಎದುರಾಗಿದೆ. ಮುಂದಿನ ಚುನಾವಣೆಗೆ ಕೂಡ್ಲಿಗಿಯಿಂದ ಸ್ಪರ್ಧೆ ಮಾಡ...Read more" } ", "keywords": ",Vijayanagara,Politics,News,Public-News", "url": "https://publicnext.com/node" } ಕೂಡ್ಲಿಗಿ : ಮಾಜಿ ಸಚಿವ ಶ್ರೀರಾಮುಲು ವಿರುದ್ಧ ಬಂಗಾರು ಹನುಮಂತ ರಹಸ್ಯ ಸಭೆ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೂಡ್ಲಿಗಿ : ಮಾಜಿ ಸಚಿವ ಶ್ರೀರಾಮುಲು ವಿರುದ್ಧ ಬಂಗಾರು ಹನುಮಂತ ರಹಸ್ಯ ಸಭೆ

ಕೂಡ್ಲಿಗಿ : ಸತತ ಸೋಲಿನಿಂದ ಕಂಗೆಟ್ಟಿರುವ ಶ್ರೀರಾಮುಲುಗೆ ಮತ್ತೊಂದ್ ಬಿಗ್ ಶಾಕ್ ಎದುರಾಗಿದೆ. ಮುಂದಿನ ಚುನಾವಣೆಗೆ ಕೂಡ್ಲಿಗಿಯಿಂದ ಸ್ಪರ್ಧೆ ಮಾಡುವ ತಯಾರಿಯಲ್ಲಿರುವ ರಾಮುಲುಗೆ ಸ್ಥಳೀಯರ ಪ್ರಬಲ ವಿರೋಧ ವ್ಯಕ್ತವಾಗಿದ್ದು, ಶ್ರೀರಾಮುಲು ವಿರುದ್ಧ ST ಮೋರ್ಚಾ ರಾಜ್ಯಾಧ್ಯಕ್ಷ, ಜನಾರ್ದನ ರೆಡ್ಡಿ ಪರಮಾಪ್ತ ಬಂಗಾರು ಹನುಮಂತ ಬೆಂಬಲಿಗರೊಂದಿಗೆ ಕೂಡ್ಲಿಯಲ್ಲಿ ರಹಸ್ಯ ಸಭೆ ನಡೆಸಿ ಶ್ರೀರಾಮುಲು ನಡೆ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ಕೂಡ್ಲಿಗಿಯಲ್ಲಿ ನಾನು ಸ್ಪರ್ಧೆ ಮಾಡ್ತಿನಿ ಅಂತ ಶ್ರೀರಾಮುಲು ಹೇಳಿದ್ದನ್ನ ವಿರೋಧಿಸಿ ಸ್ಥಳೀಯ ಬಿಜೆಪಿ ನಾಯಕರು ಕಾರ್ಯಕರ್ತರ ಮುಂದೆ ಬಂಗಾರು ಹನುಮಂತು ಅಸಮಾಧಾನ ತೋಡಿಕೊಂಡಿದ್ದಾರೆ.

ನನಗೆ ಸಂಡೂರು ಉಪಚುನಾವಣೆ ಟಿಕೆಟ್ ಸಿಕ್ಕಾಗ ವಿಜಯೇಂದ್ರಗೆ ಕರೆ ಮಾಡಿ ರಾಮುಲು ತಪ್ಪಿಸಿಲು ನೋಡಿದ್ರು. 2023 ರಲ್ಲಿ ನನಗೆ ಕೂಡ್ಲಿಗಿ ಟಿಕೇಟ್ ತಪ್ಪಿಸಿದ್ದು ಇದೇ ಶ್ರೀರಾಮುಲು. ರಾಜಕೀಯವಾಗಿ ನನಗೆ ಏನೇ ಕೆಟ್ಟದ್ದು ಮಾಡಿದ್ರು ರಾಮುಲು ಅವರನ್ನ ಅಣ್ಣನ ರೀತಿ ನೋಡಿದ್ದೇನೆ. ಶ್ರೀರಾಮುಲು ಬಳ್ಳಾರಿ ಗ್ರಾಮೀಣ ಅಥವಾ ಬೇರೆ ಎಲ್ಲಾದರು ಸ್ಪರ್ಧೆ ಮಾಡಿದ್ರು ಗೆಲ್ತಾರೆ ಎನ್ನಲಾಗ್ತಿದೆ.

ನಾನು ಈಗಾಗಲೇ ಹೈ ಕಮಾಂಡ್ ಜೊತೆ ಮಾತಾಡಿರುವೆ. 26 ರಂದು ಸಂಡೂರಿಗೆ ಜನಾರ್ದನ ರೆಡ್ಡಿ ಅವರು ಬರ್ತಿದ್ದಾರೆ. ಅವತ್ತು ನಾವು ಕೂಡ್ಲಿಗಿ ಕ್ಷೇತ್ರಕ್ಕೆ ಮುಂದಿನ ಎಲೆಕ್ಷನ್ ನಲ್ಲಿ ಸ್ಥಳಿಯರಿಗೆ ಟಿಕೆಟ್ ಕೊಡಿಸಿ ಎಂದು ಒತ್ತಾಯಿಸೋಣ. ಮುಂದಿನ ಚುನಾವಣೆಗೆ ಮೀಸಲಾತಿ ಬದಲಾದರೂ ಆಗದಿದ್ದರೂ ಸ್ಥಳೀಯರೇ ಸ್ಪರ್ಧೆ ಮಾಡೋಣ. ರಾಮುಲು ಈಗಾಗಲೇ ರಾಜ್ಯಾಧ್ಯಕ್ಷರಾದ ನಾಯಕರ ಮುಂದೆ ಕೂಡ್ಲಿಗಿ ಗೆ ನಿಲ್ಲುವೆ ಎಂದಿದ್ದಾರೆ.

ಆದ್ರೇ ಹೈಕಮಾಂಡ್ ಯಾವೊಬ್ಬ ನಾಯಕರು ಗ್ರೀನ್ ಸಿಗ್ನಲ್ ಕೊಟ್ಟಿಲ್ಲ. ಶ್ರೀರಾಮುಲು ಏನೇ ಪ್ರಯತ್ನ ಮಾಡಿದ್ರೂ ನಾವು ಸ್ಥಳೀಯರಿಗೆ ಆದ್ಯತೆ ಕೊಡಿ ಅಂತಾ ಕೇಳೋಣ ಅಂತ ಆಪ್ತರು, ಕಾರ್ಯಕರ್ತರ ಬಳಿ ಕೇಳೋಣ ಅಂತ ಬಂಗಾರು ಹನುಮಂತು ಹೇಳಿಕೊಂಡ್ರು. ಇದು ಎಲ್ಲೋ ಒಂದು ಕಡೆಗೆ ಕೂಡ್ಲಿಗಿ ST ಮೀಸಲು ಕ್ಷೇತ್ರಕ್ಕೆ ಸ್ಪರ್ಧೆ ಮಾಡೋ ಇಂಗಿತದಲ್ಲಿದ್ದ ರಾಮುಲು ಬಿಗ್ ಶಾಕ್ ಎದುರಾದಂತಾಗಿದೆ.

Edited By : Suman K
PublicNext

PublicNext

23/01/2025 04:01 pm

Cinque Terre

38.47 K

Cinque Terre

0

ಸಂಬಂಧಿತ ಸುದ್ದಿ