", "articleSection": "Crime", "image": { "@type": "ImageObject", "url": "https://prod.cdn.publicnext.com/s3fs-public/286525-1737553315-WhatsApp-Image-2025-01-22-at-7.11.44-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "ManjuVijayapura" }, "editor": { "@type": "Person", "name": "shivuk" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ವಿಜಯಪುರ: ವಿಜಯಪುರ ನಗರದ ಸಿಂದಗಿ ರಸ್ತೆಯಲ್ಲಿರುವ ಇಟ್ಟಂಗಿ ಬಟ್ಟಿಯಲ್ಲಿ ಕಾರ್ಮಿಕರ ಮೇಲೆ ಹಲ್ಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ 5 ಜನ ಆ...Read more" } ", "keywords": " Vijayapura Labour Abuse, Workers Harassed, Viral Video, Karnataka Labour Issues, Labour Rights Violation, Vijayapura News, Karnataka Crime News, Labour Law Violations, Indian Labour Movement, Worker Exploitation, Labour Abuse Video.,Bijapur,Crime", "url": "https://publicnext.com/node" }
ವಿಜಯಪುರ: ವಿಜಯಪುರ ನಗರದ ಸಿಂದಗಿ ರಸ್ತೆಯಲ್ಲಿರುವ ಇಟ್ಟಂಗಿ ಬಟ್ಟಿಯಲ್ಲಿ ಕಾರ್ಮಿಕರ ಮೇಲೆ ಹಲ್ಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ 5 ಜನ ಆರೋಪಿಗಳನ್ನ ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ. ಸದ್ಯ ಅದೇ ಪ್ರಕರಣಕ್ಕೆ ಸಂಬಂಧಿಸಿದ ಮತ್ತೊಂದು ವಿಡಿಯೋ ವೈರಲ್ ಆಗಿದ್ದು ರಾಕ್ಷಸರ ಅಟ್ಟಹಾಸ ಮತ್ತಷ್ಟು ಭಯಂಕರವಾಗಿದೆ.
ಕೆಲಸಕ್ಕೆ ಬರೋದಕ್ಕೆ ವಿಳಂಬ ಮಾಡಿದ್ದರು ಎಂಬ ಕಾರಣಕ್ಕೆ ಇಟ್ಟಂಗಿ ಭಟ್ಟಿ ಮಾಲೀಕ ಹಾಗೂ ಆತನ ಸಹಚರರು ಕಾರ್ಮಿಕರಿಗೆ ಹಿಗ್ಗಾ ಮುಗ್ಗಾ ಥಳಿಸಿದ್ದರು. ಕೈ ಕಾಲು ಕಟ್ಟಿ, ಕಾಲ ಮೇಲೆ ನಿಂತು ಪೈಪ್ ನಿಂದ ಹಲ್ಲೆ ಮಾಡಿದ್ದರು. ಇನ್ನೂ ಇದಕ್ಕೂ ಮುನ್ನ ಕಾರ್ಮಿಕರ ಕೈ ಮುಂದೆ ಮಾಡಿಸಿ ಪೈಪ್ ಹಾಗೂ ಕಟ್ಟಿಗೆಯಿಂದ ಹಲ್ಲೆ ಮಾಡಲಾಗಿದೆ. ಪಾಪಾ ಅಮಾಯಕ ಕಾರ್ಮಿಕರು ಯಪ್ಪೋ, ಯವ್ವಾ.... ಎಂದು ನರಳಾಡಿದರೂ ಬಿಡದ ದುಷ್ಕರ್ಮಿಗಳು ಸುಡುವ ಬೂದಿಯಲ್ಲಿ ಕೈ ಉಜ್ಜಿಸಿ ಕರುಣೆ ಇಲ್ಲದೇ ಅಮಾನೀಯವಾಗಿ ಹಲ್ಲೆ ಮಾಡಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದ್ದು ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂಬ ಕೂಗು ಕೇಳಿಬಂದಿದೆ.
-ಮಂಜು ಕಲಾಲ, ಪಬ್ಲಿಕ ನೆಕ್ಸ್ಟ್, ವಿಜಯಪುರ
PublicNext
22/01/2025 07:12 pm