", "articleSection": "Crime", "image": { "@type": "ImageObject", "url": "https://prod.cdn.publicnext.com/s3fs-public/52563-1737533594-59fa53f3-a866-4850-bc61-75817eb2e24a.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "nirmala.aralikatti" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ವಾಷಿಂಗ್ಟನ್‌ : ಅಮೆರಿಕದಲ್ಲಿ 154 ಕೆಜಿ ತೂಕದ ಮಹಿಳೆ ತನ್ನ 10 ವರ್ಷದ ದತ್ತು ಮಗನ ಮೇಲೆ ಕೂತು ಕೊಂದ ಘಟನೆ ನಡೆದಿದೆ. ಹೌದು ಅಮೆರಿಕದ ಇಂಡಿ...Read more" } ", "keywords": "Woman weighing 154 kg kills 10-year-old foster son by sitting on him in US, jailed,,Crime", "url": "https://publicnext.com/node" } ಮಗನ ಮೇಲೆ ಕುಳಿತು ಹತ್ಯೆ ಮಾಡಿದ 154 ಕೆಜಿ ತೂಕದ ತಾಯಿ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಗನ ಮೇಲೆ ಕುಳಿತು ಹತ್ಯೆ ಮಾಡಿದ 154 ಕೆಜಿ ತೂಕದ ತಾಯಿ

ವಾಷಿಂಗ್ಟನ್‌ : ಅಮೆರಿಕದಲ್ಲಿ 154 ಕೆಜಿ ತೂಕದ ಮಹಿಳೆ ತನ್ನ 10 ವರ್ಷದ ದತ್ತು ಮಗನ ಮೇಲೆ ಕೂತು ಕೊಂದ ಘಟನೆ ನಡೆದಿದೆ.

ಹೌದು ಅಮೆರಿಕದ ಇಂಡಿಯಾನಾ ರಾಜ್ಯದಲ್ಲಿ 154 ಕೆಜಿ ತೂಕದ ಜೆನ್ನಿಫರ್‌ ಲೀ ವಿಲ್ಸನ್‌ (48) ಎಂಬ ಮಹಿಳೆ ತನ್ನ ದತ್ತು ಪುತ್ರ ಡಕೋಟಾ ಲೆವಿ ಸ್ಟೀವನ್ಸ್‌ (10) ಕೊಲೆ ಮಾಡಿದ್ದಾಳೆ. ಸದ್ಯ ಪುತ್ರನನ್ನು ಕೊಂದಿದ್ದಕ್ಕೆ ಆಕೆಗೆ 6 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಅಕ್ಟೋಬರ್‌ನಲ್ಲಿ 5 ನಿಮಿಷಗಳ ಕಾಲ ಮಗುವಿನ ಮೇಲೆ ಕುಳಿತು ಕೊಲೆ ಮಾಡಿದ್ದಾಳೆ.

ಸ್ಟೀವನ್ಸ್ 4 ಅಡಿ 10 ಇಂಚು ಎತ್ತರ ಮತ್ತು 40 ಕೆಜಿ ತೂಕವಿದ್ದ. ಆತನ ತಾಯಿ ವಿಲ್ಸನ್ 4 ಅಡಿ 11 ಇಂಚು ಎತ್ತರ ಮತ್ತು 154 ಕೆಜಿ ತೂಕವಿದ್ದಳು. ಆಕೆ ಮಗನ ಮೇಲೆ ಕುಳಿತಿದ್ದರಿಂದ ಆತನಿಗೆ ಉಸಿರುಗಟ್ಟಿದೆ. ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ.

ಬಾಲಕನ ಮುಖದ ಮೇಲೆ ಗಾಯದ ಗುರುತಿರುವುದು ಕಂಡುಬಂದಿದೆ. ಪ್ರಕರಣ ಸಂಬಂಧ ಆರೋಪಿ ತಾಯಿಯನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆಗೆ ಒಳಪಡಿಸಿದಾಗ, ಆಕೆ ತಪ್ಪೊಪ್ಪಿಕೊಂಡಿದ್ದಾಳೆ.

Edited By : Nirmala Aralikatti
PublicNext

PublicNext

22/01/2025 02:02 pm

Cinque Terre

25.16 K

Cinque Terre

0