", "articleSection": "Cinema", "image": { "@type": "ImageObject", "url": "https://prod.cdn.publicnext.com/s3fs-public/52563-1737471119-c38726f5-d45f-4571-b398-8db33e60195f.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "nirmala.aralikatti" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬಿಗ್ ಬಾಸ್ ಸೀಸನ್ 11 ಫಿನಾಲೆ ಸಮೀಪಿಸಿದೆ ಕಪ್ ಯಾರ್ ಗೆಲ್ತಾರೆ? ಎನ್ನುವ ಕುತೂಹಲ ಎಲ್ಲರಲ್ಲಿದೆ. ಪ್ರತಿ ಸ್ಪರ್ಧಿಯೂ ತಾನು ಗೆಲ್ಲಬೇಕು ಎನ್ನುವ ...Read more" } ", "keywords": "Bigg Boss, Hanumanth, vote, reality show, TV show, Karnataka news, Indian news, entertainment news, Bigg Boss news, Hanumanth news, voting appeal, viral video, social media, Hanumanth's parents, emotional appeal, public support, Bigg Boss Kannada, reality TV show, voting process, Hanumanth's journey, Bigg Boss finale, winner prediction, Kannada TV show, entertainment updates,,Cinema", "url": "https://publicnext.com/node" }
ಬಿಗ್ ಬಾಸ್ ಸೀಸನ್ 11 ಫಿನಾಲೆ ಸಮೀಪಿಸಿದೆ ಕಪ್ ಯಾರ್ ಗೆಲ್ತಾರೆ? ಎನ್ನುವ ಕುತೂಹಲ ಎಲ್ಲರಲ್ಲಿದೆ. ಪ್ರತಿ ಸ್ಪರ್ಧಿಯೂ ತಾನು ಗೆಲ್ಲಬೇಕು ಎನ್ನುವ ತುಡಿತದಲ್ಲಿದ್ದಾರೆ.
ಸದ್ಯ ತ್ರಿವಿಕ್ರಮ್, ಮಂಜು, ರಜತ್, ಮೋಕ್ಷಿತಾ, ಭವ್ಯಾ, ಹನುಮಂತ. ಫಿನಾಲೆ ವಾರದಲ್ಲಿದ್ದಾರೆ. ಸದ್ಯ ಹನುಮಂತು ಹೆತ್ತವರು ಮುತ್ತಿನಂಥ ಮಾತನಾಡಿದ್ದಾರೆ. ಬಿಗ್ ಬಾಸ್ ಫಿನಾಲೆಗೆ ಎಂಟ್ರಿ ಕೊಟ್ಟಿರುವ ಹನುಮಂತ ಗೆದ್ದೇ ಗೆಲ್ತಾನ ಅಂತ ಹನುಮಂತನ ತಂದೆ ಮೇಘಪ್ಪ ಲಮಾಣಿ ಹಾಗೂ ತಾಯಿ ಶೀಲವ್ವ ಹೇಳಿದ್ದಾರೆ.
ಹನುಮಂತು ತಂದೆ ಮೇಘಪ್ಪ ಅವರು ನನ್ನ ಮಗ ಬಿಗ್ ಬಾಸ್ ಫಿನಾಲೆಗೆ ಸೆಲೆಕ್ಟ್ ಆದ ಅನ್ನೋದು ಚಲೋ ಅನ್ನಿಸೈತಿ. ಅವನ ಆಟ ಚಲೋ ಅನ್ನಿಸೈತಿ ಎಂದಿದ್ದಾರೆ. ನಮ್ಮ ಮಗ ಗೆಲ್ಲಬೇಕು ಹೆಂಗೆ ಗೆಲ್ಲಬೇಕು ಅನ್ನೋದು ನಮಗೆ ಗೊತ್ತಿಲ್ಲ. ಗೆಲ್ಲಬೇಕು ಅನ್ನೋದು ಪರಮಾತ್ಮನ ಆಟ. ಎಲ್ಲರೂ ನಮ್ಮವ್ರೇ. ನಮ್ಮ ಮಗನು ನಮ್ಮವ್ರೇ. ಬಿಗ್ ಬಾಸ್ ಮನೆಯಲ್ಲಿ ಇರೋರೆಲ್ಲಾ ನಮ್ಮ ಮಕ್ಕಳೇ. ಯಾರೇ ಗೆದ್ದರು ನಮ್ಮ ಮಕ್ಕಳೇ. ಯಾರೇ ಗೆದ್ದರೂ ನಮಗೆ ಖುಷಿ ಆಗುತೈತೆ ಎಂದಿದ್ದಾರೆ.
ಮಗ ಗೆದ್ದು ಬರಲಿ ಎಂದು ಹಾರೈಸಿ ನಾಡಿನ ಜನತೆ ಬಳಿ ನಮ್ಮ ಮಗನಿಗೆ ವೋಟ್ ಮಾಡಿ ಗೆಲ್ಲಿಸಿ ಎಂದು ಮನವಿ ಮಾಡಿದ್ದಾರೆ.
PublicNext
21/01/2025 08:23 pm