ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿರಸಿ: 20 ದಿನಗಳಲ್ಲಿ ಅಡಿಕೆ ಬೆಳೆಗಾರಿಗೆ ವಿಮೆ ಪರಿಹಾರ- ಶಾಸಕ ಶಿವರಾಮ ಹೆಬ್ಬಾರ್

ಶಿರಸಿ: ಕೆಲವು ದಿನಗಳಿಂದ ಜಿಲ್ಲೆಯ ರೈತರಿಗೆ ಬೆಳೆ ವಿಮೆ ಪರಿಹಾರ ಬಂದಿಲ್ಲವೆಂಬ ಕೂಗು ಕೇಳಿ ಬಂದಿತ್ತು.

ಅದರ ಫಲವಾಗಿ ಮುಂದಿನ 20 ದಿನಗಳಲ್ಲಿ‌ ಉತ್ತರ ಕನ್ನಡ ಜಿಲ್ಲೆಯ ಅಡಿಕೆ ಬೆಳೆಗಾರರಿಗೆ ಬೆಳೆವಿಮಾ ಪರಿಹಾರದ ಹಣವನ್ನು ‌ನೀಡುತ್ತೇವೆ ಎಂದು ಸಚಿವರು ಒಪ್ಪಿಗೆ ಸೂಚಿಸಿದ್ದಾರೆಂದು ಯಲ್ಲಾಪುರ- ಮುಂಡಗೋಡ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ನಗರದ ಕೆಡಿಸಿಸಿ ಬ್ಯಾಂಕಿನಲ್ಲಿ ‌ಮಾಧ್ಯಮದವರ ಮೂಲಕ ತಿಳಿಸಿದ್ದಾರೆ.

RWBCIS ಅನ್ನು ಉತ್ತರ ಕನ್ನಡ ಜಿಲ್ಲೆಯ 220 ಗ್ರಾಮ ಪಂಚಾಯತಿಗಳಲ್ಲಿ ವಿವಿಧ ಬೆಳೆಗಳನ್ನು ಅಡಿಕೆ, ಮೆಣಸು, ಮಾವು ಮತ್ತು ಶುಂಠಿ ಒಟ್ಟು ನಾಲ್ಕು ಬೆಳೆಗಳು ಒಳಗೊಂಡಂತೆ ಅಧಿಸೂಚಿಸ ಲಾಗಿರುತ್ತದೆ.ಅದರಲ್ಲಿ 195 ಗ್ರಾಮ ಪಂಚಾಯತಿ (IUs), 263 ವಿಮಾ ಘಟಕ-ಬೆಳೆ ಸಂಯೋಜನೆಗಳಲ್ಲಿ ವಿಮಾ ನೋಂದಣಿಯಾಗಿರುತ್ತದೆ.

ವಿಮಾ ಕಂಪನಿಯು 59 ಘಟಕಗಳಲ್ಲಿ (GP) ವಿಮಾ ಪಾವತಿಗೆ ಸಹಮತ ನೀಡಿರುತ್ತದೆ.

ಇದು 70 ವಿಮಾ ಘಟಕ-ಬೆಳೆ ಸಂಯೋಜನೆಗಳನ್ನು ಹೊಂದಿದೆ.

ಉಳಿದ 136 ವಿಮಾ ಘಟಕಗಳಿಗೆ (GPs) (193 ವಿಮಾ ಘಟಕ- ಬೆಳೆ ಸಂಯೋಜನೆಗಳು) ವಿಮಾ ಕಂಪನಿಯು ಹವಾಮಾನದ ಬಗ್ಗೆ (ಮಳೆ ದತ್ತಾಂಶ) ಸ್ಪಷ್ಟೀಕರಣವನ್ನು ಕೋರಿದೆ.

ಬಹುತೇಕ ವಿಮಾ ಘಟಕಗಳಲ್ಲಿ (GPs) ಒಂದೇ ರೀತಿಯ ಮಳೆಯ ದತ್ತಾಂಶವನ್ನು ಹಾಗೂ ಕೆಲವು ಸಂದರ್ಭಗಳಲ್ಲಿ 4 ರಿಂದ 5 ವಿಮಾ ಘಟಕಗಳಲ್ಲಿ ದತ್ತಾಂಶವನ್ನು ಪುನರಾವರ್ತಿಸಲಾಗಿದೆ ಎಂದು ವಿಮಾ ಸಂಸ್ಥೆಯು ತಿಳಿಸಿರುತ್ತದೆ.

ಇದಲ್ಲದೆ, ಬಹುತೇಕ ವಿಮಾ ಘಟಕಗಳು/ಗ್ರಾಮ ಪಂಚಾಯತ್ ಗಳಿಗೆ ಒಂದೇ ಮಾದರಿ ದತ್ತಾಂಶವನ್ನು ಬಹಳ ಸಮಯದವರೆಗೆ ಒದಗಿಸಲಾಗಿರುವುದರಿಂದ ಬಹುತೇಕ AWS/TRG ಕೇಂದ್ರಗಳು ಬಹಳ ಸಮಯದವರೆಗೆ ಕಾರ್ಯನಿರ್ವಹಿಸುತ್ತಿಲ್ಲ ಎಂದು ಸೂಚಿಸುತ್ತದೆಂದು ಪ್ರತಿಪಾದಿಸಿದೆ.

ಸ್ಪಷ್ಟೀಕರಣದ ಕೊರತೆಯಿಂದಾಗಿ ವಿಮಾ ಕಂಪನಿಯು ರೈತರ ಕ್ಷೇಮ್ ಪಾವತಿಯನ್ನು ತಡೆಹಿಡಿದಿದೆ. ಎಂದು‌ ಹೇಳಿದರು.

Edited By : Somashekar
PublicNext

PublicNext

21/01/2025 01:50 pm

Cinque Terre

27.56 K

Cinque Terre

0