ಶಿರಸಿ: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು ಉತ್ತರ ಕನ್ನಡ ಜಿಲ್ಲಾ ಸಹಕಾರ ಯೂನಿಯನ್ ನಿ, ಕುಮಟಾ ಸಹಕಾರ ಇಲಾಖೆ ಹಾಗೂ
ಕೆನರಾ ಡಿಸ್ಟ್ರಿಕ್ಟ್ ಸೆಂಟ್ರಲ್ ಕೋ-ಆಪರೇಟಿವ್ ಬ್ಯಾಂಕ್ ಲಿ.ಶಿರಸಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ನಗರದ ಕೆಡಿಸಿಸಿ ಬ್ಯಾಂಕ್ ಪ್ರಧಾನ ಕಚೇರಿಯ ಸುಂದರರಾವ್ ಪಂಡಿತ ಸ್ಮಾರಕ ಸಭಾಭವನದಲ್ಲಿ ಬೆಳಗಾವಿ ವಿಭಾಗದ ಆಯ್ದ ಪತ್ತಿನ ಸಹಕಾರ ಸಂಘಗಳ ಪದಾಧಿಕಾರಿಗಳು ಹಾಗೂ ಮುಖ್ಯ ಕಾರ್ಯನಿರ್ವಾಹಕರುಗಳಿಗೆ
ರಾಜ್ಯ ಮಟ್ಟದ ವಿಶೇಷ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮವನ್ನು ಸೋಮವಾರ ಯಲ್ಲಾಪುರ -ಮುಂಡಗೋಡ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಉದ್ಘಾಟನೆ ಮಾಡಿದರು.
ನಂತರ ಮಾತನಾಡಿದ ಅವರು ಸಹಕಾರಿ ಸಂಘದಲ್ಲಿ ಶ್ರದ್ಧೆ , ನಿಷ್ಠೆ, ಪ್ರಾಮಾಣಿಕತೆ ಇಲ್ಲದಿದ್ದರೆ ಸಹಕಾರಿ ಕ್ಷೇತ್ರ ಉಳಿಯುವುದು ಬಹಳ ಕಷ್ಟಕರ ಎಂದರು.
ಅಲ್ಲದೇ ಗದಗಿನಲ್ಲಿ ಜನ್ಮ ತಾಳಿದ ಈ ಒಂದು ಸಹಕಾರಿ ಕ್ಷೇತ್ರ ಉತ್ತರ ಕನ್ನಡ ಜಿಲ್ಲೆಯಲ್ಲಿ ಹೆಮ್ಮರವಾಗಿ ಬೆಳೆದಿದೆ. ಅದನ್ನು ಬೆಳೆಸಿ ಉಳಿಸಿದ ಕೀರ್ತಿ ಉತ್ತರ ಕನ್ನಡ ಜಿಲ್ಲಾ ಸಹಕಾರಿಗಳಿಗೆ ಸಲ್ಲುತ್ತದೆ ಎಂದರು.
ಈ ಒಂದು ಸಂಸ್ಥೆಯನ್ನು 105 ವರ್ಷಗಳ ಹಿಂದೆ ದಿ.ಪಂಡಿತ ರವರು ಕಟ್ಟಿಸಿ ಬೆನ್ನೆಲುಬಾಗಿ ನಿಂತು ಈ ಸಹಕಾರಿ ಕ್ಷೇತ್ರವನ್ನು ಬೆಳೆಸಿದ್ದಾರೆ.
ಈಗ ಒಂದು ಕಡೆ ಪತ್ತಿನ ಸಹಕಾರಿ ಸಂಘಗಳು, ಪ್ರಾಥಮಿಕ ಸಹಕಾರಿ ಸಂಘಗಳು ಸ್ಪರ್ಧಾತ್ಮಕ ಮನೋಭಾವನೆ ನಡೆಸುತ್ತಿವೆ. ಮತ್ತೊಂದು ಕಡೆ ಸ್ವಾರ್ಥ ಸಹಕಾರಿ ಸಂಘಗಳ ಅನಿಯಂತ್ರಿತ ಬೆಳವಣಿಗೆ ಸಹಕಾರಿ ಕ್ಷೇತ್ರದ ಮೇಲೆ ಬಹಳ ದೊಡ್ಡ ಪೆಟ್ಟನ್ನು ಕೊಡ್ತಾಯಿವೆ ಎಂದರು.
ರಾಜ್ಯದಲ್ಲಿ 19 ಜಿಲ್ಲೆಗಳಲ್ಲಿದ್ದ ಸಹಕಾರಿ ಕ್ಷೇತ್ರಗಳು ಕೇವಲ ಈಗ 8 ಜಿಲ್ಲೆಗಳಿಗೆ ಬಂದು ನಿಂತಿದೆ. ರಾಜ್ಯ ಸರಕಾರದ ಕಾನೂನು, ಕೇಂದ್ರ ಸರಕಾರದ ಕಾನೂನು ಮತ್ತು ನಾನು ಯಾವುದೇ ಸರಕಾರಗಳ ಬಗ್ಗೆ ಪ್ರಶ್ನೆ ಮಾಡಲು ಹೋಗುವುದಿಲ್ಲ. ಆದರೆ ಸಹಕಾರಿ ಕ್ಷೇತ್ರದಲ್ಲಿ ಸರಕಾರದ ಹಸ್ತಕ್ಷೇಪ ಸರಕಾರದ ನಡವಳಿಕೆಯಲ್ಲಿ ಬದಲಾವಣೆ ಕಾಣದೇ ಹೋದರೆ, ಸಹಕಾರಿ ಸಂಘಗಳ ಉಳಿವು ಕಷ್ಟಕರವಾಗಿದೆ. ಒಂದು ಕಡೆ ಪ್ರೈವೇಟ್ ಫೈನಾನ್ಸ್ ತರ ಕೆಲಸ ಮಾಡುವ ಪರಿಸ್ಥಿತಿ ನಿರ್ಮಾಣವಾದರೆ ನಮ್ಮ ನಿಮ್ಮಂತ ಸಂಘಗಳು ಬಹಳ ದಿನ ಜೀವಂತವಾಗಿರಲು ಸಾಧ್ಯವಿಲ್ಲ ಎಂದರು.
ಸಹಕಾರಿ ಬ್ಯಾಂಕುಗಳು 20% ಸಾಲ ಕೊಡುತ್ತವೆ , 16% ಠೇವಣಿಗಳನ್ನು ಇಟ್ಟುಕೊಳ್ಳುತ್ತವೆ. ಒಂದು ವೇಳೆ ಆ ಸಹಕಾರಿ ಬ್ಯಾಂಕುಗಳು ಅಧಃಪತನಕ್ಜೆ ಹೋದರೆ ಠೇವಣಿಗಳ ಬಗ್ಗೆ ವಿಶ್ವಾಸ ಕೊಡತಕ್ಕಂತವರು ಯಾರೂ ಇಲ್ಲ.
ಉದಾಹರಣೆಗೆ ಬೆಂಗಳೂರಿನ ಬಸವನ ಗುಡಿಯ ರಾಘವೇಂದ್ರ ಸೌಹಾರ್ದ ಬ್ಯಾಂಕ್ ನ 1700/- ಕೋಟಿ ಹೋಗಿದ್ದು ಮತ್ತು ಅಲ್ಲಿಯೇ ಇರುವ ವಸಿಷ್ಠ ಸೌಹಾರ್ದ ಬ್ಯಾಂಕ್ ನ 650/- ಕೋಟಿ ಕಳೆದು ಕೊಂಡಿದ್ದನ್ನು ಮತ್ತು ಅಲ್ಲಿ ಠೇವಣಿ ಇಟ್ಟವರ ಪಾಡೇನು ಎಂದರು.
ಅದಕ್ಕಾಗಿ ನಾವು ನೀವು ಈ ಒಂದು ಸಹಕಾರಿ ಕ್ಷೇತ್ರವನ್ನು ಇನ್ನೂ ಗಟ್ಟಿಗೊಳಿಸುವ ಅನಿವಾರ್ಯತೆ ಬಂದಿದೆ ಎಂದರು .
ಈ ಸಂದರ್ಭದಲ್ಲಿ ಟಿಎಮ್ಎಸ್ ಅಧ್ಯಕ್ಷ ಜಿ.ಟಿ ಹೆಗಡೆ, ಕೆಡಿಸಿಸಿ ಬ್ಯಾಂಕ್ ಎಮ್ ಡಿ ಶ್ರೀಕಾಂತ ಜಿ ಭಟ್ಟ, ಕಮಲಾಕರ ಭಟ್ಟ ಮುಂತಾದವರು ಉಪಸ್ಥಿತರಿದ್ದರು.
Kshetra Samachara
21/01/2025 01:42 pm