ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿತ್ರದುರ್ಗ : ಚಿಕ್ಕಪ್ಪನಳ್ಳಿ ಗ್ರಾಮಸ್ಥರಿಂದ ಮನವಿ

ಚಿತ್ರದುರ್ಗ : ತುರುವನೂರು ಹೋಬಳಿ ಚಿಕ್ಕಪ್ಪನಹಳ್ಳಿ ಗ್ರಾಮದಲ್ಲಿ ಜ.1 ಹೊಸ ವರ್ಷದಂದು ಕೆಲವು ಕಿಡಿಗೇಡಿಗಳು ಅಂಬೇಡ್ಕರ್ ಭಾವಚಿತ್ರದ ಭಾವುಟ ಸುಟ್ಟು ಹಾಕಿರುವುದಕ್ಕೆ ದಲಿತ ಸಂಘಟನೆಗಳ ಮಹಾ ಒಕ್ಕೂಟ ಜ.24 ರಂದು ಚಿಕ್ಕಪ್ಪನಹಳ್ಳಿಯಿಂದ ಚಿತ್ರದುರ್ಗದವರೆಗೆ ಹಮ್ಮಿಕೊಂಡಿರುವ ಕಾಲ್ನಡಿಗೆ ಜಾಥಕ್ಕೆ ಅವಕಾಶ ನೀಡಬಾರದೆಂದು ಚಿಕ್ಕಪ್ಪನಹಳ್ಳಿ ಗ್ರಾಮದ ಎಲ್ಲಾ ಕೋಮಿನವರು ಸೋಮವಾರ ಪೊಲೀಸ್ ಉಪಾಧೀಕ್ಷರಿಗೆ ಮನವಿ ಸಲ್ಲಿಸಿದರು.

ಚಿಕ್ಕಪ್ಪನಹಳ್ಳಿ ಗ್ರಾಮದಲ್ಲಿ ಅಹಿತಕರ ಘಟನೆ ನಡೆದಿದ್ದರು, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಮೇಲ್ವಜಾತಿಯವರು ಸೇರಿದಂತೆ ಇಡಿ ಗ್ರಾಮದಲ್ಲಿರುವ ಎಲ್ಲರೂ ಅಣ್ಣತಮ್ಮಂದಿರಂತೆ ಸಹಭಾಳ್ವೆಯಿಂದ ಬದುಕುತ್ತಿದ್ದೇವೆ. ಇಂತಹ ಸನ್ನಿವೇಶದಲ್ಲಿ ದಲಿತ ಸಂಘಟನೆಗಳ ಮಹಾ ಒಕ್ಕೂಟ ಕಾಲ್ನಡಿಗೆ ಜಾಥ ನಡೆಸಿ ಮತ್ತೆ ಗ್ರಾಮದಲ್ಲಿ ಶಾಂತಿ ಕದಡುವ ಹುನ್ನಾರ ನಡೆಸುತ್ತಿದ್ದಾರೆ. ಒಂದು ವೇಳೆ ಕಾಲ್ನಡಿಗೆ ಜಾಥ ನಡೆಸಿದ್ದೇ ಆದಲ್ಲಿ ಗ್ರಾಮದಲ್ಲಿ ಎದುರಾಗುವ ಅನಾಹುತಗಳಿಗೆ ಸರ್ಕಾರವೇ ನೇರ ಹೊಣೆಯಾಗಬೇಕಾಗುತ್ತದೆ. ಆದ್ದರಿಂದ ಕಾಲ್ನಡಿಗೆ ಜಾಥ ನಡೆಸುವವರನ್ನು ಕರೆಸಿ ಬುದ್ದಿ ಮಾತು ಹೇಳಿ ಗ್ರಾಮದಲ್ಲಿ ಶಾಂತಿ ಕದಡದಂತೆ ನೋಡಿಕೊಳ್ಳಬೇಕೆಂದು ಪೊಲೀಸ್ ಉಪಾಧೀಕ್ಷಕರಲ್ಲಿ ವಿನಂತಿಸಿದರು.

ಚಂದ್ರಪ್ಪ, ಮಾರುತಿ, ಚಿದಾನಂದಮೂರ್ತಿ, ರಾಜಪ್ಪ, ದಲಿತ ಸಂಘರ್ಷ ಸಮಿತಿ ದಾದಾಸಾಹೇಬ್ ಎನ್.ಮೂರ್ತಿ ಸ್ಥಾಪಿತ ಜಿಲ್ಲಾಧ್ಯಕ್ಷ ಮಂಜುನಾಥ್, ಮಲ್ಲಿಕಾರ್ಜುನ್, ರವಿಕುಮಾರ್, ಕೊಟ್ರಸ್ವಾಮಿ, ಸಂತೋಷ, ರಾಜಶೇಖರ್, ಹೇಮಣ್ಣ, ಲೋಕೇಶ್, ಹೆಚ್.ಶಾಂತಮ್ಮ, ದೇವರಾಜ, ಎನ್.ಕೆ.ರವಿಕುಮಾರ್, ಪಿ.ದುರುಗಪ್ಪ, ಜೆ.ಮಹಾಂತೇಶ, ಸಂತೋಷ್‍ಕುಮಾರ್ ಇನ್ನು ಅನೇಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Edited By : PublicNext Desk
PublicNext

PublicNext

20/01/2025 06:16 pm

Cinque Terre

19.2 K

Cinque Terre

0

ಸಂಬಂಧಿತ ಸುದ್ದಿ