", "articleSection": "Crime,Law and Order", "image": { "@type": "ImageObject", "url": "https://prod.cdn.publicnext.com/s3fs-public/387839-1737368726-Untitled-design---2025-01-20T155456.717.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "abhishek.kamoji" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ತಿರುವನಂತಪುರಂ: ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಶರೋನ್ ರಾಜ್ ಹತ್ಯೆ ಪ್ರಕರಣದ ಆರೋಪಿಗಳಿಗೆ ಶಿಕ್ಷೆ ಪ್ರಕಟವಾಗಿದೆ. ವಿಷ ಹಾಕಿ ಪ್ರಿಯಕರನನ್ನ...Read more" } ", "keywords": "Sharon Raj Murder Case, Poisoning, Girlfriend Kills Boyfriend, Greeshma Sentenced, Death Penalty, Karnataka Crime, Murder Conviction, Women Criminals.,,Crime,Law-and-Order", "url": "https://publicnext.com/node" }
ತಿರುವನಂತಪುರಂ: ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಶರೋನ್ ರಾಜ್ ಹತ್ಯೆ ಪ್ರಕರಣದ ಆರೋಪಿಗಳಿಗೆ ಶಿಕ್ಷೆ ಪ್ರಕಟವಾಗಿದೆ. ವಿಷ ಹಾಕಿ ಪ್ರಿಯಕರನನ್ನು ಕೊಲೆ ಮಾಡಿದ್ದ ಗ್ರೀಷ್ಮಾಗೆ ನೆಯ್ಯಟ್ಟಿಂಕರ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಮರಣದಂಡನೆ ವಿಧಿಸಿದೆ.
ರೇಡಿಯಾಲಜಿ ವಿದ್ಯಾರ್ಥಿ ಶರೋನ್ ರಾಜ್ 2022ರಲ್ಲಿ ವಿಷ ಪ್ರಾಶನದಿಂದ ಹತ್ಯೆಯಾಗಿದ್ದ. ಆಸ್ಪತ್ರೆಯಲ್ಲಿ ಸಾಯುವ ಮುನ್ನ ತನ್ನ ಸಂಬಂಧಿಕರಲ್ಲಿ ತನ್ನ ಪ್ರೇಯಸಿ ಗ್ರೀಷ್ಮಾ ವಿಷ ಹಾಕಿದ್ದಾಗಿ ಹೇಳಿದ್ದ. ಪೊಲೀಸ್ ವಿಚಾರಣೆ ವೇಳೆ ಗ್ರೀಷ್ಮಾ ಶರೋನ್ ರಾಜ್‌ಗೆ ವಿಷ ಹಾಕಿದ್ದಾಗಿ ಒಪ್ಪಿಕೊಂಡಿದ್ದಳು. ಕಳೆದ ಶುಕ್ರವಾರ (ಜ.17) ಗ್ರೀಷ್ಮಾ ಅಪರಾಧಿ ಎಂದು ತೀರ್ಪು ನೀಡಿದ್ದ ನ್ಯಾಯಾಲಯ, ಜ.20ಕ್ಕೆ ಶಿಕ್ಷೆಯನ್ನು ಕಾಯ್ದಿರಿಸಿತ್ತು.
'ಇದೊಂದು ಅಪರೂಪದ ಪ್ರಕರಣವಾಗಿದ್ದು, ಶಿಕ್ಷೆ ನೀಡುವ ಸಂದರ್ಭದಲ್ಲಿ ಆಕೆಯ ವಯಸ್ಸನ್ನು ಪರಿಗಣಿಸಲು ಸಾಧ್ಯವಿಲ್ಲ' ಎಂದು ಉಲ್ಲೇಖಿಸಿ ನ್ಯಾಯಾಲಯ ಮರಣದಂಡನೆ ವಿಧಿಸಿದೆ.
ಮಹಿಳೆಯ ಜೊತೆಗೆ ಆಕೆಯ ಚಿಕ್ಕಪ್ಪ, ಪ್ರಕರಣದ ಮೂರನೇ ಆರೋಪಿ ನಿರ್ಮಲಕುಮರನ್ ನಾಯರ್ ಅವರಿಗೂ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.
PublicNext
20/01/2025 03:56 pm