ಚಿತ್ರದುರ್ಗ : ಭಾರತ ದೇಶದ ಬೆನ್ನೆಲುಬು ರೈತ ಅಂತ ಹೇಳ್ತಾರೆ ಆದರೆ ರೈತನ ಬೆನ್ನೆಲುಬು ಮುರಿದು ಹೋಗಿದೆ ಎಂದು ನವ ಕರ್ನಾಟಕ ರಾಜ್ಯ ಕಾರ್ಯದರ್ಶಿ ಮಲ್ಲಿಕಾರ್ಜುನ್ ಅವರು ತಿಳಿಸಿದರು.
ಚಿತ್ರದುರ್ಗ ನಗರದ ಪತ್ರಿಕ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು ರೈತರ ಸಮಸ್ಯೆಗಳು ಸಾಕಷ್ಟುವೆ, ಆದರೆ ಸರ್ಕಾರಗಳು ಮಾತ್ರ ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಭಾರತ ದೇಶದ ಬೆನ್ನೆಲುಬು ರೈತ ಅಂತಾರೆ ಆದರೆ ರೈತನ ಬೆನ್ನೆಲುಬು ಮುರಿದುಹೋಗಿದೆ ಸರ್ಕಾರಗಳು ರೈತನ ಬದುಕಿಗೆ ಪುಷ್ಟಿಯನ್ನು ನೀಡಬೇಕಾಗಿದೆ ಎಂದು ತಿಳಿಸಿದರು.
ದೇಶ ಕಾಯುವ ಸೈನಿಕ ಹಾಗೂ ರೈತ ಈ ದೇಶದ ಗೌರವವನ್ನು ಕಾಪಾಡುತ್ತಿದ್ದಾರೆ ನವ ಕರ್ನಾಟಕ ರೈತ ಸಂಘ ರಾಜ್ಯದ ಎಲ್ಲೆಡೆ ಸಂಘವನ್ನ ಸ್ಥಾಪಿಸಿ ರೈತರ ಕಷ್ಟಗಳಿಗೆ ನಿರಂತರವಾಗಿ ಶ್ರಮಿಸುತ್ತಿದೆ ಈ ಒಂದು ಸಂಘಟನೆ ಯಾವ ರಾಜಕೀಯ ಪಕ್ಷಕ್ಕೆ ಸೀಮಿತವಾಗದೆ ರೈತರ ಧನಿಯಾಗಿ ನೀತಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷರಾದ ಮೋಹನ್ ಮಹಿಳಾ ಜಿಲ್ಲಾಧ್ಯಕ್ಷ ಆಶಾ ಹಾಗೂ ಇತರರು ಇದ್ದರು.
PublicNext
20/01/2025 12:47 pm