", "articleSection": "Politics", "image": { "@type": "ImageObject", "url": "https://prod.cdn.publicnext.com/s3fs-public/39640520250120123817filescapture.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SundarChamarajnagar" }, "editor": { "@type": "Person", "name": "112068327297121593490" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಚಾಮರಾಜನಗರ : ಮುಡಾದಲ್ಲಿ 5 ಸಾವಿರ ಕೋಟಿಗೂ ಅಧಿಕ ಆಸ್ತಿ ದುರುಪಯೋಗ ಆಗಿರುವ ಹಿನ್ನೆಲೆಯಲ್ಲಿ ಹಗರಣದ ಆರೋಪಿಯಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ...Read more" } ", "keywords": "Siddaramaiah, Resignation Demand, Karnataka Politics, Congress Leader, Political Crisis, Government Stability, Opposition Pressure, Leadership Change. ¹,Chamarajnagar,Politics", "url": "https://publicnext.com/node" } ಚಾಮರಾಜನಗರ : ಸಿದ್ದರಾಮಯ್ಯ ಕೂಡಲೇ ರಾಜೀನಾಮೆ ನೀಡಲಿ - ಎನ್.ಮಹೇಶ್
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಾಮರಾಜನಗರ : ಸಿದ್ದರಾಮಯ್ಯ ಕೂಡಲೇ ರಾಜೀನಾಮೆ ನೀಡಲಿ - ಎನ್.ಮಹೇಶ್

ಚಾಮರಾಜನಗರ : ಮುಡಾದಲ್ಲಿ 5 ಸಾವಿರ ಕೋಟಿಗೂ ಅಧಿಕ ಆಸ್ತಿ ದುರುಪಯೋಗ ಆಗಿರುವ ಹಿನ್ನೆಲೆಯಲ್ಲಿ ಹಗರಣದ ಆರೋಪಿಯಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ತನಿಖೆಗೆ ಸಹಕರಿಸಬೇಕು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್ ಆಗ್ರಹಿಸಿದರು.

ಮುಡಾಹಗರಣ ಪ್ರಕರಣದಲ್ಲಿ ದೊಡ್ಡ ಮಟ್ಟದ ವಾದ, ವಿವಾದ ನಡೆಯಿತು. ನ್ಯಾಯಾಧೀಶರ ತೀರ್ಪುನಲ್ಲಿ ಮುಖ್ಯಮಂತ್ರಿ ಅವರ ಸೃಜನಪಕ್ಷಪಾತ ಹಾಗೂ ಪ್ರಭಾವ ಇರುವ ಆರೋಪವನ್ನ ತಳ್ಳಿ ಹಾಕಲು ಸಾಧ್ಯವಿಲ್ಲ. ರಾಜ್ಯಪಾಲರು ನೀಡಿರುವ ಪ್ರಾಸಿಕ್ಯೂಸನ್ ಕ್ರಮಬದ್ಧವಾಗಿದೆ ಎಂದು ಬಂದಿದೆ ಎಂದು ಅವರು ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.

ಜಾರಿ ನಿರ್ದೇಶನಾಲಯ ಈಗ ಮುಡಾದಲ್ಲಿ 300 ಕೋಟಿಗೂ ಅಧಿಕ ಆಸ್ತಿ, 142 ಸ್ಥಿರಾಸ್ತಿಗಳನ್ನು ಜಪ್ತಿ ಮಾಡಿದೆ. ಜತೆಗೆ ಮುಡಾಗೆ ಒಂದು ಪತ್ರ ಬರೆದು,631 ನಿವೇಶನಗಳ ದಾಖಲೆ ಕೊಡಿ ಎಂದು ಕೇಳಿದೆ. ಈಗ ಇಡಿ ಗುರುತಿಸಿರುವುದು 300 ಕೋಟಿ ಆಸ್ತಿ, 631 ನಿವೇಶನಗಳ ಹಣ ಲೆಕ್ಕಾ ಮಾಡಿದರೆ ಸುಮಾರು 5 ಸಾವಿರ ಕೋಟಿ ಆಸ್ತಿ ದುರುಪಯೋಗ ಆಗಿದೆ. ಬಡವರಿಗೆ ನೀಡಬೇಕಾದ ನಿವೇಶನವನ್ನು ಶ್ರೀಮಂತರು, ರಾಜಕಾರಣಿಗಳು ಪಡೆದುಕೊಂಡಿದ್ದಾರೆ. ಈ ಹಗರಣದ ಆರೋಪಿಯಾಗಿರುವ ಮುಖ ಮಂತ್ರಿ ಸಿದ್ದರಾಮಯ್ಯನವರು ತಮ್ಮ ಸ್ಥಾನಕೆ ರಾಜೀನಾಮೆ ಕೊಟ್ಟು, ತನಿಖೆಗೆ ಸಹಕರಿಸುವಂತೆ ಒತ್ತಾಯಿಸಿದರು.

ಕಳೆದ ಒಂದು ಮುಕ್ಕಾಲು ವರ್ಷದಿಂದ ರಾಜ್ಯದಲ್ಲಿ ಆಡಳಿತ ನಡೆಯುತ್ತಾ ಇದೆಯೋ, ಸರ್ಕಾರ ಇದೆಯೋ,ಇಲ್ಲ ವೋ ಎನ್ನುವ ಸಂಶಯ ಬರುತ್ತಿದೆ. ಕಾನೂನು ಸುವ್ಯವಸ್ಥೆ ಹಳ್ಳ ಹದಗೆಟ್ಟಿದೆ. ರಾಜಾರೋಷವಾಗಿ ದರೋಡೆಕೋರರು, ಕಳ್ಳರು, ಬ್ಯಾಂಕುಗಳಿಗೆ ನುಗ್ಗಿ ದರೋಡೆ ಮಾಡಿಕೊಂಡು ಬೇರೆಬೇರೆ ರಾಜ್ಯಗಳಿಗೆ ಹೋಗಿ ತಪ್ಪಿಸಿಕೊಳ್ಳುವ ಕೆಲಸ ಆಗುತ್ತಿದೆ ಎಂದರು.

ಬೀದರ್‌ನಲ್ಲಿ ಎಟಿಎಂಗೆ ಹಣ ಹಾಕುತ್ತಿದ್ದ ವೇಳೆಯಲ್ಲಿ ಸಿಬ್ಬಂದಿಗೆ ಶೂಟ್ ಮಾಡಿ 93 ಲಕ್ಷ ರೂ. ಹಣ ದೋಚಿಕೊಂಡು ಪರಾರಿಯಾಗಿದ್ದಾರೆ. ಮಾರನೇ ದಿನ ಮಂಗಳೂರಿನಲ್ಲಿ ಬ್ಯಾಂಕ್‌ ಗೆ ನಾಲ್ಕಾರು ಕಳ್ಳರು ನುಗ್ಗಿ 4 ಕೋಟಿ ರೂ. ಬೆಳೆಬಾಳುವ ಚಿನ್ನಾಭರಣ, 13 ಲಕ್ಷ ನಗದು ದೋಚಿ ಪರಾರಿಯಾಗಿದ್ದಾರೆ. ಇದನ್ನು ನೋಡಿದರೆ ಕಳ್ಳರಿಗೆ ದರೋಡೆಕೋರರಿಗೆ ಕರ್ನಾಟಕ ರಾಜ್ಯದಲ್ಲಿ ಲೂಟಿ ಮಾಡಬಹುದು ಎಂಬ ಮಾಹಿತಿ ಸಿಕ್ಕಿದೆ. ಇದಕ್ಕೆ ಕಾರಣ ರಾಜ್ಯದ ಕಾನೂನು ಸುವ್ಯವಸ್ಥೆ ಕುಸಿದಿದೆ. ಇದು ದೊಡ್ಡದುರಂತವಾಗಿದೆ ಎಂದರು.

Edited By : PublicNext Desk
PublicNext

PublicNext

20/01/2025 12:35 pm

Cinque Terre

14.18 K

Cinque Terre

0