", "articleSection": "Politics,Government", "image": { "@type": "ImageObject", "url": "https://prod.cdn.publicnext.com/s3fs-public/405356-1737297370-vike.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Praveen Onkari" }, "editor": { "@type": "Person", "name": "Vinayak.Patil" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಧಾರವಾಡ: ಧಾರವಾಡದ ಜೆಎಸ್ಎಸ್ ಕಾಲೇಜಿನ ಸಭಾಭವನದಲ್ಲಿ ಕೇಂದ್ರ ಸರ್ಕಾರದ ಅಡಿಪ್ ಯೋಜನೆಯಡಿ ದಿವ್ಯಾಂಗ ಹಾಗೂ ವಿಕಲಚೇತನರಿಗಾಗಿ ಹಮ್ಮಿಕೊಂಡಿದ್ದ ಸಾ...Read more" } ", "keywords": "Dharwad, Central Government Aid, Physically Challenged, Battery-Operated Vehicles, Hearing Aids, Joshi, Karnataka News, Indian Government Schemes, Disability Support, Assistive Devices,Hubballi-Dharwad,Politics,Government", "url": "https://publicnext.com/node" }
ಧಾರವಾಡ: ಧಾರವಾಡದ ಜೆಎಸ್ಎಸ್ ಕಾಲೇಜಿನ ಸಭಾಭವನದಲ್ಲಿ ಕೇಂದ್ರ ಸರ್ಕಾರದ ಅಡಿಪ್ ಯೋಜನೆಯಡಿ ದಿವ್ಯಾಂಗ ಹಾಗೂ ವಿಕಲಚೇತನರಿಗಾಗಿ ಹಮ್ಮಿಕೊಂಡಿದ್ದ ಸಾಮಾಜಿಕ ಅಧಿಕಾರಿತ ಶಿಬಿರ ಮತ್ತು ರಾಷ್ಟ್ರೀಯ ವಯೋಶ್ರೀ ಯೋಜನೆಯಡಿ ಭಾರತ ಸರ್ಕಾರದ ಅಲಿಮ್‌ಕೋ ವತಿಯಿಂದ ಉಚಿತ ಸಹಾಯಕ ಸಾಮಗ್ರಿ ಮತ್ತು ಸಲಕರಣೆಗಳ ವಿತರಣಾ ಕಾರ್ಯಕ್ರಮಕ್ಕೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಚಾಲನೆ ನೀಡಿದರು.
ಧಾರವಾಡ ಲೋಕಸಭಾ ಕ್ಷೇತ್ರದಾದ್ಯಂತ ನಡೆದ ಮೌಲ್ಯಮಾಪನ ಶಿಬಿರದಲ್ಲಿ ಆಯ್ಕೆಯಾದ ವಿಕಲಚೇತನರು ಹಾಗೂ ಹಿರಿಯ ನಾಗರಿಕರಿಗೆ ಬ್ಯಾಟರಿ ಚಾಲಿತ ತ್ರಿಚಕ್ರ ವಾಹನ, ಗಾಲಿ ಕುರ್ಚಿ, ಕ್ರಚ್, ಶ್ರವಣ ಸಾಧನ, ಬುದ್ಧಿಮಾಂದ್ಯ ಮಕ್ಕಳಿಗೆ ಎಂಎಸ್‌ಐಡಿ ಕಿಟ್, ಬ್ರೈಲ್ ಕಿಟ್ ಮುಂತಾದ ಸಲಕರಣೆಗಳನ್ನು ಉಚಿತವಾಗಿ ನೀಡಲಾಯಿತು.
ರಾಷ್ಟ್ರೀಯ ವಯೋಶ್ರೀ ಯೋಜನೆಯಡಿ 55 ಲಕ್ಷದ ಹಾಗೂ ಕೇಂದ್ರ ಸರ್ಕಾರದ ಅಡಿಪ್ ಯೋಜನೆ ಅಡಿ 136 ಲಕ್ಷದ ಸಾಮಗ್ರಿ ಮತ್ತು ಸಲಕರಣೆಗಳ ವಿತರಣೆ ಮಾಡಲಾಯಿತು.
ಈ ವೇಳೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಲೋಕಸಭಾ ಚುನಾವಣೆ ನಂತರ ಕ್ಷೇತ್ರದಲ್ಲಿ ಇರುವ ದಿವ್ಯಾಂಗರನ್ನು ಗುರುತಿಸಿ, ಕೃತಕ ಕಾಲು, ಬ್ಯಾಟರಿ ವಾಹನ, ಚೇರ್ ಹಾಗೂ ಇತರೆ ವಸ್ತುಗಳನ್ನು ನೀಡಲಾಗುತ್ತಿದೆ, ಶೇ.40 ವಿಕಲಚೇತನರು ಇದ್ದರೂ ಅವರಿಗೆ ಸವಲತ್ತು ಕೊಡಲಾಗುತ್ತಿದೆ. 2014 ರಿಂದ ಮೂರು ಬಾರಿ ಈ ಯೋಜನೆಯಲ್ಲಿ ವಸ್ತುಗಳನ್ನು ಕೊಡಲಾಗಿದೆ ಎಂದರು.
ಕೇಂದ್ರದ ರಾಜ್ಯ ಸಾಮಾಜಿಕ ನ್ಯಾಯ ಸಬಲೀಕರಣ ರಾಜ್ಯ ಖಾತೆ ಸಚಿವ ಬಿ.ಎಲ್.ವರ್ಮಾ ಮಾತನಾಡಿ, ಪ್ರಧಾನಿ ಮೋದಿ ಅವರು ವಿಕಲಚೇತನರಿಗೆ ಮಾಡಬೇಕಾದ ಎಲ್ಲ ಯೋಜನೆ ಮಾಡುತ್ತಿದ್ದು, ಬಡತನ ಕೂಡ ಹೋಗಲಾಡಿಸಲು ಕೆಲಸ ಮಾಡುತ್ತಿದ್ದಾರೆ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಕೂಡ ಅವರು ಮಾಡುತ್ತಿದ್ದು, ವಿಕಲಚೇತನರಿಗೆ ಈ ಮೊದಲು ಇಂತಹ ಕೆಲಸ ಮಾಡಿರಲಿಲ್ಲ. ಈಗ ಅದು ಆರಂಭ ಆಗಿದೆ ಎಂದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
19/01/2025 08:06 pm