", "articleSection": "Politics", "image": { "@type": "ImageObject", "url": "https://prod.cdn.publicnext.com/s3fs-public/405356-1737294783-eduuu.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Praveen Onkari" }, "editor": { "@type": "Person", "name": "Vinayak.Patil" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಧಾರವಾಡ: ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷದ ನಾಯಕರ ಬಡಿದಾಟದಿಂದಾಗಿ ರಾಜ್ಯದ ಆಡಳಿತದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಕೇಂದ್ರ ಸ...Read more" } ", "keywords": "Dharwad, Congress, Karnataka Politics, State Administration, Joshi, Indian National Congress, Karnataka Government, Political Impact, Dharwad News, Karnataka News,Hubballi-Dharwad,Politics", "url": "https://publicnext.com/node" }
ಧಾರವಾಡ: ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷದ ನಾಯಕರ ಬಡಿದಾಟದಿಂದಾಗಿ ರಾಜ್ಯದ ಆಡಳಿತದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಧಾರವಾಡದಲ್ಲಿ ಮಾತನಾಡಿದ ಅವರು, ಇವರ ಬಡಿದಾಟದ ವಿಷಯ ಬಿಟ್ಟು ಬಿಜೆಪಿಯ ಬಡಿದಾಟದ ಬಗ್ಗೆ ಇವರು ಮಾತನಾಡುತ್ತಾರೆ. ನಮ್ಮ ಪಕ್ಷದ ಬಡಿದಾಟದ ಬಗ್ಗೆ ಮಾತನಾಡುವುದು ಇವರ ಕೆಲಸವಲ್ಲ. ಸಿಎಂ ಸೇರಿ ಹಲವರು ನಮ್ಮ ಪಕ್ಷದ ಬಗ್ಗೆ ಸಾಕಷ್ಟು ಮಾತನಾಡಿದ್ದಾರೆ. ಅವರು ಮಾತನಾಡಿದ್ದಕ್ಕಾಗಿಯೇ ಇಂದು ನಾವೂ ಕೂಡ ಅವರ ಪಕ್ಷದ ಬಡಿದಾಟದ ಬಗ್ಗೆ ಮಾತನಾಡಬೇಕಾಗಿದೆ ಎಂದರು.
ಸಚಿವ ಸಂತೋಷ ಲಾಡ್ ಅವರು ಸ್ವಾಮಿತ್ವದ ಬಗ್ಗೆ ಮಾತನಾಡಿದ್ದಾರೆ. ಈ ಕಾಂಗ್ರೆಸ್ ಚಿಲ್ಲರೆ ರಾಜಕಾರಣ ಮಾಡುತ್ತಿದೆ. ಸ್ವಾಮಿತ್ವ ಎಂಬುದು ಭಾರತ ಸರ್ಕಾರದ ಯೋಜನೆ. ಇದನ್ನು ಆರಂಭ ಮಾಡಿದ್ದೇ ನಾವು. ಮೋದಿ ಅವರು ಬರುವ ಮೊದಲು ಹಳ್ಳಿಯಲ್ಲಿ ವಾಸ ಮಾಡುವ ಜನರ ಮನೆ ಹಾಗೂ ಸುತ್ತಮುತ್ತಲ ವಾತಾವರಣದ ಬಗ್ಗೆ ಇವರಿಗೆ ಲಕ್ಷ್ಯವೇ ಇರಲಿಲ್ಲ. 60 ವರ್ಷ ಈ ದೇಶದಲ್ಲಿ ಕಾಂಗ್ರೆಸ್‌ನವರು ಆಡಳಿತ ಮಾಡಿದರು. ಆಗ ಯಾವುದೂ ಇವರಿಗೆ ಲಕ್ಷ್ಯಕ್ಕೇ ಇರಲಿಲ್ಲ. ರಸ್ತೆ ಬದಿ ವ್ಯಾಪಾರ ಮಾಡುವವರ, ಹಳ್ಳಿಯಲ್ಲಿ ರೈತರ ಜಾಗ ಬಿಟ್ಟು ಉಳಿದ ಜಾಗಕ್ಕೆ ಗುರುತು ಕೊಡುವುದು ಸ್ವಾಮಿತ್ವ ಯೋಜನೆಯ ಉದ್ದೇಶ. ಇದಾಗಿದ್ದೇ ಮೋದಿ ಕಾಲದಲ್ಲಿ. ವಿಚಿತ್ರ ಎಂದರೆ ಇವರು ಮೋದಿ ಭಾವಚಿತ್ರವನ್ನೇ ಇವರು ಹಾಕುವುದಿಲ್ಲ. ಇದರಿಂದ ಅಧಿಕಾರಿಗಳ ವರ್ತನೆ ಸಹ ಹೇಗಿದೆ ಎಂಬುದು ಗೊತ್ತಾಗುತ್ತದೆ ಎಂದರು.
ಗಾಂಧಿ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಮಾತನಾಡಿದ ಜೋಶಿ, ಮಹಾತ್ಮ ಗಾಂಧಿ ಕಾಂಗ್ರೆಸ್ ಪಕ್ಷವನ್ನು ವಿಸರ್ಜನೆ ಮಾಡಲು ಹೇಳಿದ್ದರು. ಅವರು ಹೇಳಿದಂತಹ ಪಕ್ಷ ಈಗ ಅಸ್ತಿತ್ವದಲ್ಲಿ ಇಲ್ಲ. ಈಗಿನ ಕಾಂಗ್ರೆಸ್ ಪಕ್ಷದ್ದು ಎ ದಿಂದ ಝಡ್‌ವರೆಗೆ ಎಲ್ಲವೂ ಮುಗಿದು ಹೋಗಿದೆ. ಇದು ಓರಿಜಿನಲ್ ಕಾಂಗ್ರೆಸ್ ಅಲ್ಲ. ಇದು ಡುಪ್ಲಿಕೇಟ್. ಇದು ನಕಲಿ ಕಾಂಗ್ರೆಸ್ಸಿನ ನಕಲಿ ಗಾಂಧಿಗಳ ಸಮಾವೇಶ. ಇದಕ್ಕೆ ಸರ್ಕಾರದ ದುಡ್ಡು ಪೋಲು ಮಾಡುತ್ತಿದ್ದಾರೆ. ಸರ್ಕಾರದ ದುಡ್ಡಲ್ಲಿ ಜಾತ್ರೆ ಮಾಡುತ್ತಿದ್ದಾರೆ. ಈ ಕಾಂಗ್ರೆಸ್‌ನವರು ಎರಡು ರಾಜ್ಯದಲ್ಲು ಜೀವ ಇಟ್ಟುಕೊಂಡು ಕುಳಿತಿದ್ದಾರೆ. ಈ ಹಿಂದೆ ಇದೇ ರೀತಿಯ ಸಮಾವೇಶ ಮಾಡುತ್ತಿದ್ದರು. ದುರ್ದೈವದಿಂದ ಮನಮೋಹನ್ ಸಿಂಗ್ ಅವರ ದೇಹಾಂತ್ಯ ಆಗಿದ್ದರಿಂದ ಅದನ್ನು ಮುಂದೂಡಿದರು. ಮತ್ತೆ ಅದೇ ದುಡ್ಡನ್ನು ಖರ್ಚು ಮಾಡಿ ಕಾರ್ಯಕ್ರಮ ಮಾಡುತ್ತಿದ್ದಾರೆ. ಕಾಂಗ್ರೆಸ್‌ನಲ್ಲಿ ದುಡ್ಡೇ ಇಲ್ಲದ ಕಾರಣ ಹಲವು ಕಾರ್ಯಕ್ರಮಗಳು ನಿಂತು ಹೋಗಿವೆ ಎಂದು ಒಂದು ವರದಿ ಹೇಳಿದೆ. ಈ ರೀತಿಯ ಸ್ಥಿತಿ ಇಟ್ಟುಕೊಂಡು ಕಾಂಗ್ರೆಸ್‌ನವರು ಈ ರೀತಿ ಹಣ ಪೋಲು ಮಾಡುತ್ತಿದ್ದಾರೆ ಎಂದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
19/01/2025 07:23 pm