ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು: ಎನ್.ಆರ್ ಪುರ - ಭದ್ರಾ ಹಿನ್ನೀರಿನಲ್ಲಿ ಕಾಡನೆಗಳನ್ನು ಹಿಮ್ಮೆಟ್ಟಿಸಲು ಬಂತು ನೂತನ ಬೋಟ್

ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನಲ್ಲಿ ಕಾಡಾನೆಗಳ ಉಪಟಳ ದಿನದಿನಕ್ಕೂ ಹೆಚ್ಚಾಗುತ್ತಿದೆ ಅದರಲ್ಲೂ ನರಸಿಂಹರಾಜಪುರ ತಾಲೂಕಿನಲ್ಲಿ ಕಾಡಾನೆಗಳ ಹಾವಳಿ ವಿಪರೀತವಾಗಿದ್ದು ಜನರಿಗೆ ತಲೆ ನೋವಾಗಿ ಪರಿಣಮಿಸಿದೆ. ತಾಲೂಕಿನ ಭದ್ರ ಹಿನ್ನೀರಿನಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ಕಾಡಾನೆಗಳನ್ನು ತಡೆಯಲು ಅರಣ್ಯ ಇಲಾಖೆಯ ಆನೆ ಕಾವಲು ಪಡೆ ಸಿಬ್ಬಂದಿಗೆ ಅನುಕೂಲವಾಗುವಂತೆ ಶೃಂಗೇರಿ ಶಾಸಕ ಟಿ.ಡಿ ರಾಜೇಗೌಡ ನೂತನ ಬೋಟ್ ನ್ನು ಹಸ್ತಾಂತರ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಹಿನ್ನೀರನ್ನು ದಾಟಿ ಬರುವ ಆನೆಗಳನ್ನು ಕಡಿವಾಣ ಹಾಕಲು ಆನೆ ಕಾವಲು ಸಿಬ್ಬಂದಿಗಳಿಗೆ ಸರಿಯಾದ ಬೋಟ್ ವ್ಯವಸ್ಥೆ ಇರಲಿಲ್ಲ ಹೀಗಾಗಿ ನೀರಿನಲ್ಲಿ ಬರುವ ಆನೆಗಳನ್ನು ನಿಯಂತ್ರಿಸಲು ಕಷ್ಟವಾಗುತ್ತಿತ್ತು ಇದನ್ನ ಮನಗಂಡು ಈ ಬೋಟನ್ನು ನೂತನ ನೀಡಲಾಗಿದೆ ಇದನ್ನ ಸಿಬ್ಬಂದಿಗಳು ಜಾಗೃತವಾಗಿ ಬಳಸಬೇಕು ಎಂದರು.

Edited By : PublicNext Desk
Kshetra Samachara

Kshetra Samachara

19/01/2025 06:34 pm

Cinque Terre

3.08 K

Cinque Terre

0

ಸಂಬಂಧಿತ ಸುದ್ದಿ