ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನಿಂದ ಶೃಂಗೇರಿಗೆ ಸಂಪರ್ಕಿಸುವ ರಾಜ್ಯ ಹೆದ್ದಾರಿಯಲ್ಲಿ ಪ್ರತಿನಿತ್ಯ ನೂರಾರು ವಾಹನಗಳು ಪ್ರವಾಸಿ ವಾಹನಗಳು ಸೇರಿದಂತೆ ಹಲವು ಸ್ಥಳೀಯ ವಾಹನಗಳು ಓಡಾಟ ನಡೆಸುತ್ತವೆ. ಆದರೆ ತೋರಣಮಾವು, ಪುರ, ದಿಣ್ಣೆಕೆರೆ ಗ್ರಾಮಗಳ ರಸ್ತೆ ಬದಿಯಲ್ಲಿರುವ ಮರಗಳು ಒಣಗಿ ಬಾಗಿ ನಿಂತಿದ್ದು ಅಪಾಯ ಆಹ್ವಾನ ನೀಡುತ್ತಿವೆ. ಒಂದುವೇಳೆ ವಾಹನಗಳ ಮೇಲೆ ಮರ ಬಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ ಹೀಗಾಗಿ ಅರಣ್ಯ ಇಲಾಖೆಯವರು ರಸ್ತೆ ಬದಿ ಒಣಗಿ ನಿಂತಿರುವ ಮರಗಳನ್ನು ತೆರವು ಮಾಡಬೇಕಿದೆ.
Kshetra Samachara
19/01/2025 04:26 pm