ಕೋಲಾರ : ಕೋಲಾರ ತಾಲೂಕಿನ ಕೋಡಿಕಣ್ಣೂರು ಗ್ರಾಮದ ಕೆರೆ ಒತ್ತುವರಿ ತೆರವುಗೊಳಿಸುವ ಕಾರ್ಯವನ್ನು ಕಂದಾಯ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ತಹಸೀಲ್ದಾರ್ ನಯನ ಮಾರ್ಗದರ್ಶನದಲ್ಲಿ ಕಂದಾಯ ಹಾಗೂ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳ ತಂಡ ಪೊಲೀಸರ ಬೆಂಗಾವಲಿನಲ್ಲಿ ಕೋಡಿಕಣ್ಣೂರು ಕೆರೆ ಒತ್ತುವರಿ ತೆರವು ಕಾರ್ಯಾಚರಣೆ ಆರಂಭಿಸಿದ್ದಾರೆ.
ಮುಂದಿನ ಎರಡು-ಮೂರು ದಿನಗಳಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ಪೂರ್ಣಗೊಳ್ಳಲಿದೆ ಎಂದು ತಹಸೀಲ್ದಾರ್ ನಯನ ತಿಳಿಸಿದರು. ಕೋಡಿಕಣ್ಣೂರು ಕೆರೆ ಸರ್ವೇ ನಂ.126 ರಲ್ಲಿ ಒತ್ತುವರಿಯಾಗಿರುವ ಪ್ರಕರಣ ಲೋಕಾಯುಕ್ತ ನ್ಯಾಯಾಲಯದಲ್ಲಿ ದಾಖಲಾಗಿತ್ತು. ನಮ್ಮಲ್ಲಿಯೂ ಯಾವ ಯಾವ ಕೆರೆಯಲ್ಲಿ ಒತ್ತುವರಿ ತೆರವು ಕಾರ್ಯ ನಡೆಸಬೇಕು ಎಂದು ಪರಿಶೀಲಿಸಿ ಸರ್ವೆ ನಡೆಸಲು ಆಗಸ್ಟ್ ತಿಂಗಳಲ್ಲೇ ಆದೇಶಿಸಲಾಗಿತ್ತು. ಅದರಂತೆ ಕೆರೆಗೆ ಹೊಂದಿಕೊಂಡಂತಹ ಲಾರಿ ಸ್ಟಾಂಡ್ ಜಾಗದ14 ಗುಂಟೆ ಒತ್ತುವರಿಯಾಗಿರುವುದು ಕಂಡು ಬಂದಿದೆ ಎಂದರು.
Kshetra Samachara
19/01/2025 04:23 pm