ಮೈಸೂರು : ಬೆಂಗಳೂರು ಅರಮನೆ ಹಾಗೂ ಸರ್ಕಾರದ ನಡುವಿನ ತಿಕ್ಕಾಟಕ್ಕೆ ಮೈಸೂರಿನಲ್ಲಿ ಯದುವೀರ್ ಒಡೆಯರ್ ಹೇಳಿಕೆ ನೀಡಿದ್ದು, ಅರಮನೆ, ಸರ್ಕಾರದ ನಡುವೆ ಬಹಳ ವರ್ಷದಿಂದ ಕಾನೂನಿನ ಸಂಘರ್ಷ ನಡೆಯುತ್ತಿದೆ. ನಾನು ರಾಜಕಾರಣಕ್ಕೆ ಬಂದ ಕಾರಣಕ್ಕೆ ಅದು ಹೆಚ್ಚಾಗಿಲ್ಲ. ಅದು ಸಿದ್ದರಾಮಯ್ಯ ಮೊದಲ ಬಾರಿ ಉಪಮುಖ್ಯಮಂತ್ರಿಯಾದ ದಿನದಿಂದ ಈ ಹೋರಾಟ ಶುರುವಾಗಿದೆ ಎಂದಿದ್ದಾರೆ.
ಸರ್ಕಾರಕ್ಕೆ ಅರಮನೆ ಟಾರ್ಗೆಟ್ ಎಂಬುದರಲ್ಲಿ ಯಾವ ಆಶ್ಚರ್ಯವೂ ಇಲ್ಲ. ನಾವು ಸದಾ ಕಾಲ ಟಾರ್ಗೆಟ್ ಆಗುತ್ತಲೇ ಬಂದಿದ್ದೇವೆ. ಎಲ್ಲವನ್ನೂ ಕಾನೂನಾತ್ಮಕವಾಗಿ ಎದುರಿಸುತ್ತೇವೆಂದು ಮೈಸೂರಿನಲ್ಲಿ ಸಂಸದ ಯದುವೀರ್ ಹೇಳಿದ್ದಾರೆ.
PublicNext
18/01/2025 05:02 pm