ಶೃಂಗೇರಿ: ಜ್ಞಾನವೇ ಬೆಳಕು, ಅಜ್ಞಾನವೇ ಕತ್ತಲು. ಕತ್ತಲಿನಿಂದ ಬೆಳಕಿನೆಡೆಗೆ ಸಾಗುವುದೇ ಮನುಷ್ಯನ ಗುರಿ ಎಂದು ಕ್ಷೇತ್ರಶಿಕ್ಷಣಾಧಿಕಾರಿ ಎನ್. ಜಿ. ರಾಘವೇಂದ್ರ ಹೇಳಿದರು. ತಾಲೂಕಿನ ಮಸಿಗೆ ಶಾಲೆಯಲ್ಲಿ ಇಂದು ಅಕ್ಷರ ದೀಪೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತಾಡಿ, ನಾವು ಹಚ್ಚುವ ದೀಪ ಎಲ್ಲರಿಗೂ ಬೆಳಕು ನೀಡಲೆಂಬ ವಿಶಾಲ ಮನೋಭಾವ ಎಲ್ಲರಲ್ಲಿರಬೇಕು ಈ ಹಾದಿಯಲ್ಲಿ ಸಾಗಲು ಶಿಕ್ಷಣದ ಜತೆ ಸಂಸ್ಕಾರದ ಅಗತ್ಯವಿದೆ. ದೀಪ ಹಚ್ಚುವುದು ಆಧ್ಯಾತ್ಮಿಕ ಮೌಲ್ಯದ ಸಂಕೇತವಾಗಿದ್ದು, ಶಿಕ್ಷಣದ ಬೆಳಕಿನಿಂದ ಬದುಕ ಬೆಳಗಬಹುದೆಂದು ಅಭಿಪ್ರಾಯ ಪಟ್ಟರು.
Kshetra Samachara
17/01/2025 10:29 pm