ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಆಹಾರ ವಿತರಿಸುವ ಗಿಗ್ ಕಾರ್ಮಿಕರಿಗೆ ಜೀವನ ಭದ್ರತೆ - ಸರಕಾರದ ಮಧ್ಯಪ್ರವೇಶಕ್ಕೆ ಒತ್ತಾಯ

ಮಂಗಳೂರು: ಆನ್‌ಲೈನ್ ಮೂಲಕ ಬೇಡಿಕೆ ಸಲ್ಲಿಸಿದ ಗ್ರಾಹಕರಿಗೆ ಆಹಾರ ಪದಾರ್ಥಗಳನ್ನು ಪೂರೈಸುವ ಗಿಗ್ ಕಾರ್ಮಿಕರಿಗೆ ಜೀವನ ಭದ್ರತೆ ಒದಗಿಸುವ ವಿಷಯದಲ್ಲಿ ಸರಕಾರ ಮಧ್ಯಪ್ರವೇಶಿಸುವಂತೆ ಸೋಶಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್ (ಎಸ್‌ಡಿಟಿಯು) ಒತ್ತಾಯಿಸಿದೆ.

ಕುಟುಂಬಗಳನ್ನು ಸಲಹುವ ಉದ್ದೇಶದಿಂದ ಮಂಗಳೂರು ನಗರದಲ್ಲಿ ಸ್ಟಿಗ್ಗಿ, ಝಮ್ಯಾಟೋ, ರಾಪಿಡೋ, ಬ್ಲಿಂಕಿಟ್ ಮೊದಲಾದದ ಕಂಪೆನಿಗಳಲ್ಲಿ ನೂರಾರು ಗಿಗ್ ಕಾರ್ಮಿಕರು ದುಡಿಯುತ್ತಿದ್ದು, ಕಂಪೆನಿಗಳು ಇವರನ್ನು ಅಮಾನವೀಯ ರೀತಿಯಲ್ಲಿ ನಡೆಸಿಕೊಳ್ಳುತ್ತಿವೆ. ಸ್ವಿಗ್ಗಿ ಕಂಪೆನಿಯಿಂದ ಆಗುತ್ತಿರುವ ಅನ್ಯಾಯದ ವಿರುದ್ಧ ಕಾರ್ಮಿಕರು ನಾಲ್ಕು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಎಸ್‌ಡಿಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಖಾದರ್ ಫರಂಗಿಪೇಟೆ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ದೈನಂದಿನ ಖರ್ಚು, ವಾಹನದ ಖರ್ಚು, ಇಂಧನ ಇತ್ಯಾದಿ ಖರ್ಚುಗಳನ್ನು ಭರಿಸಲು ಗಿಗ್ ಕಾರ್ಮಿಕರು ದಿನದ 10ರಿಂದ 11 ಗಂಟೆಯವರೆಗೂ ಡೆಲಿವರಿ ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲಿ ಅಪಘಾತ ಸಂಭವಿಸಿ ಪ್ರಾಣ ಕಳೆದುಕೊಂಡ ಘಟನೆಯೂ ಸಂಭವಿಸಿದೆ. ಸರಕಾರ ಗಿಗ್ ಕಾರ್ಮಿಕರಿಗಾಗಿ ವಿಶೇಷ ವಿಮಾ ಸೌಲಭ್ಯ ಒದಗಿಸಿಲ್ಲ. ಕಾರ್ಮಿಕರಿಂದ ಕಂಪೆನಿಗಳು ನಡೆಸುವ ಹಗಲು ದರೋಡೆಗೆ ಸರಕಾರ ಸೂಕ್ತ ಕ್ರಮ ಕೈಗೊಳ್ಳದ ಹೊರತು ಯಾವುದೇ ವಿಮಾ ಸೌಲಭ್ಯಗಳು ಉಪಯೋಗ ಶೂನ್ಯ ಎಂದವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಎಸ್‌ಡಿಟಿಯು ಜಿಲ್ಲಾ ಪ್ರ.ಕಾರ್ಯದರ್ಶಿ ರಹ್ಮಾನ್ ಬೋಳಿಯಾರ್, ಮಂಗಳೂರು ದಕ್ಷಿಣ ಅಧ್ಯಕ್ಷ ಇಕ್ವಾಲ್ ಬಿ.ಪಿ., ಆಟೊ ಯೂನಿಯನ್ ದಕ್ಷಿಣ ಇದರ ಇಲ್ಯಾಸ್ ಬೆಂಗ್ರೆ ಮತ್ತು ಗಿಗ್ ಕಾರ್ಮಿಕ ಜಾಹಿದ್ ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

17/01/2025 10:25 pm

Cinque Terre

1.34 K

Cinque Terre

0

ಸಂಬಂಧಿತ ಸುದ್ದಿ