ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾಸನ : ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಹತ್ಯೆ..!

ಚನ್ನರಾಯಪಟ್ಟಣ : ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯನ್ನ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಚನ್ನರಾಯಪಟ್ಟಣ ತಾಲ್ಲೂಕಿನ ಕುಂಬಾರಹಳ್ಳಿ ಗ್ರಾಮದಲ್ಲಿ ನಡೆದಿದೆ. ನಂಜುಂಡೇಗೌಡ (ಲೋಕೇಶ್) (44) ಕೊಲೆಯಾದ ವ್ಯಕ್ತಿ.

ರೈತರಿಂದ ಹಾಲು ಸಂಗ್ರಹಿಸಿ ಡೈರಿಗೆ ಹಾಕಲು ಮಹೀಂದ್ರ ವಾಹನದಲ್ಲಿ ತೆರಳುತ್ತಿದ್ದ ನಂಜುಂಡೇಗೌಡರ ಮೇಲೆ ಏಕಾಏಕಿ ದಾಳಿ ನಡೆದಿದೆ.

ಮರುವನಹಳ್ಳಿ-ಮಡಬ ರಸ್ತೆಯಲ್ಲಿ ಮರದ ಪಟ್ಟಿಗೆ ಮೊಳೆ ಇಟ್ಟು ವಾಹನ ಪಂಕ್ಚರ್ ಮಾಡಿದ ದುರುಳರು ಕೂಡಲೇ ಕೆಳಗಿಳಿದ ನಂಜುಂಡೇಗೌಡನ ಮೇಲೆ ಲಾಂಗು ಮಚ್ಚಿನಿಂದ ಭೀಕರವಾಗಿ ಕೊಚ್ಚಿ ಕೊಲೆಗೈದಿದ್ದಾರೆ.

ತಲೆ, ಕುತ್ತಿಗೆ, ಕೈ ಕತ್ತರಿಸಿ ಲಾಂಗ್ ಸ್ಥಳದಲ್ಲೇ ಬಿಟ್ಟು ಎಸ್ಕೇಪ್ ಆಗಿದ್ದಾರೆ. ಚನ್ನರಾಯಪಟ್ಟಣ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Edited By : Abhishek Kamoji
PublicNext

PublicNext

17/01/2025 01:56 pm

Cinque Terre

14.03 K

Cinque Terre

0

ಸಂಬಂಧಿತ ಸುದ್ದಿ