", "articleSection": "Crime", "image": { "@type": "ImageObject", "url": "https://prod.cdn.publicnext.com/s3fs-public/235762-1737358723-Untitled-design-(87).jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Shashikumar Hassan" }, "editor": { "@type": "Person", "name": "nagaraj.talugeri" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಬೇಲೂರು: ಆನ್‌ಲೈನ್ ಗೇಮ್‌ನಿಂದ ಹಣ ಕಳೆದುಕೊಂಡು ಮನನೊಂದು ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೇಲೂರು ಪಟ್ಟಣದ ಬಸ್ ನಿಲ್ದಾಣ ಬಳಿ ಇರುವ ಪುಷ್ಪ...Read more" } ", "keywords": "Belur news, online gaming addiction, youth suicide, lodge suicide, Karnataka crime, online gaming risks, gaming addiction, suicide news, Belur police, Karnataka news, online gaming dangers, youth mental health. ,Hassan,Crime", "url": "https://publicnext.com/node" } ಬೇಲೂರು: ಆನ್‌ಲೈನ್ ಗೇಮ್‌ನಲ್ಲಿ ಹಣ ಕಳೆದುಕೊಂಡು ಲಾಡ್ಜ್‌ನಲ್ಲಿ ಆತ್ಮಹತ್ಯೆಗೆ ಶರಣಾದ ಯುವಕ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೇಲೂರು: ಆನ್‌ಲೈನ್ ಗೇಮ್‌ನಲ್ಲಿ ಹಣ ಕಳೆದುಕೊಂಡು ಲಾಡ್ಜ್‌ನಲ್ಲಿ ಆತ್ಮಹತ್ಯೆಗೆ ಶರಣಾದ ಯುವಕ

ಬೇಲೂರು: ಆನ್‌ಲೈನ್ ಗೇಮ್‌ನಿಂದ ಹಣ ಕಳೆದುಕೊಂಡು ಮನನೊಂದು ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೇಲೂರು ಪಟ್ಟಣದ ಬಸ್ ನಿಲ್ದಾಣ ಬಳಿ ಇರುವ ಪುಷ್ಪಗಿರಿ ಲಾಡ್ಜ್‌ನಲ್ಲಿ ನಡೆದಿದೆ.

23 ವರ್ಷದ ರಾಕೇಶ್ ಗೌಡ ಎಂಬ ಯುವಕ ನೇಣಿಗೆ ಶರಣಾಗಿದ್ದಾನೆ. ಮೃತ ರಾಕೇಶ್ ಗೌಡ ತಾಲ್ಲೂಕಿನ ಚೋಕನಹಳ್ಳಿ ಗ್ರಾಮದವನಾಗಿದ್ದು, ಇವನು ಟಾಟ ಕ್ಯಾಪಿಟಲ್‌ ಫೈನಾನ್ಸ್‌ನಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದ್ದು, ಹಲವಾರು ತಿಂಗಳಿಂದ ಆನ್‌ಲೈನ್ ಗೇಮ್‌ನಲ್ಲಿ ರಾಕೇಶ್ ಗೌಡ ಮಗ್ನನಾಗಿದ್ದ. ರಮ್ಮಿ ಆನ್‌ಲೈನ್ ಗೇಮ್ ನಲ್ಲಿ ಆಟವಾಡಿ ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದ.

ನಿನ್ನೆ ಮಧ್ಯಾಹ್ನ 2 ಗಂಟೆ ಸುಮಾರಿಗೆ ಚೋಕನಹಳ್ಳಿಯಿಂದ ಬೇಲೂರು ಪುಷ್ಪಗಿರಿ ಲಾಡ್ಜ್‌ಗೆ ಬಂದಿದ್ದಾನೆ. ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಡೆತ್ ನೋಟ್‌ನಲ್ಲಿ ಅವರ ತಾಯಿಗೆ ಕ್ಷಮೆ ಕೇಳಿ, ರಮ್ಮಿ ಆನ್‌ಲೈನ್ ಗೇಮ್ ಬ್ಯಾನ್ ಮಾಡಬೇಕು ಯಾರು ಆನ್‌ಲೈನ್ ಗೇಮ್ ಆಡಬೇಡಿ, ಆನ್‌ಲೈನ್ ಗೇಮ್ ಬ್ಯಾನ್ ಮಾಡುವಂತೆ ಡೆತ್ ನೋಟ್‌ನಲ್ಲಿ ಮನವಿ ಮಾಡಿದ್ದಾನೆ. ಬೇಲೂರು ಶಾಸಕ ಹುಲ್ಲಳ್ಳಿ ಸುರೇಶ್ ನನ್ನ ಅಂತಿಮ ದರ್ಶನಕ್ಕೆ ಬರಬೇಕು ಎಂದು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ನಿನ್ನೆ ಸಂಜೆಯಾದರು ರೂಮ್‌ನಿಂದ ಯುವಕ ಹೊರಬಂದಿಲ್ಲ. ಲಾಡ್ಜ್‌ನವರಿಗೆ ಅನುಮಾನ ಬಂದು ಪೊಲೀಸ್‌ಗೆ ಮಾಹಿತಿ ತಿಳಿಸಿದ್ದಾರೆ. ಪೋಲೀಸ್ ಮತ್ತು ಸ್ಥಳೀಯರು ಬಂದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ. ಸ್ಥಳಕ್ಕೆ ಬೇಲೂರು ಠಾಣೆ ಪಿಎಸ್‌ಐ ಎಸ್.ಜಿ ಪಾಟೀಲ್ ಹಾಗೂ ಸಿಬ್ಬಂದಿ ಭೇಟಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದೆ. ಮೃತರ ಕುಟುಂಬಕ್ಕೆ ಶಾಸಕ ಎಚ್.ಕೆ ಸುರೇಶ್ ಭೇಟಿ ನೀಡಿ ಸಾಂತ್ವನ ಹೇಳಿದರು.

Edited By : Nagaraj Tulugeri
PublicNext

PublicNext

20/01/2025 01:09 pm

Cinque Terre

16.14 K

Cinque Terre

0

ಸಂಬಂಧಿತ ಸುದ್ದಿ