ಹುಬ್ಬಳ್ಳಿ : ಹುಬ್ಬಳ್ಳಿ ಧಾರವಾಡ ಬಿ.ಆರ್.ಟಿ.ಎಸ್ ಡಿವೈಡರ್'ಗೆ ಬೇಂದ್ರೆ ನಗರ ಸಾರಿಗೆ ಬಸ್ ಡಿಕ್ಕಿ ಹೊಡೆದ ಘಟನೆ ಇಂದು ಸಂಜೆ ಆರ್.ಎನ್.ಎಸ್ ಶೋ ರೂಮ್ ಎದುರು ನಡೆದಿದೆ.
ಹೌದು ! ಧಾರಾವಾಡದಿಂದ ಹುಬ್ಬಳ್ಳಿಯತ್ತ ಬರುತ್ತಿದ್ದ ಬೇಂದ್ರೆ ನಗರ ಸಾರಿಗೆ ಬಸ್ ಚಾಲಕನ ನಿಯಂತ್ರಣ ತಪ್ಪಿ ಬಿ.ಆರ್.ಟಿ.ಎಸ್ ಡಿವೈಡರ್'ಗೆ ಡಿಕ್ಕಿ ಹೊಡೆದು ಬಸ್ ಮುಂಭಾಗ ನಜ್ಜುಗುಜ್ಜಾಗಿದೆ.
ಇನ್ನೂ ಬಸ್ ಡಿಕ್ಕಿಯಾದ ರಭಸಕ್ಕೆ ಬಿ.ಆರ್.ಟಿ.ಎಸ್ ಡಿವೈಡರ್ ಹಾಳಾಗಿದೆ, ಈ ಘಟನೆ ಉತ್ತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಶ್ರೀಧರ ಪೂಜಾರ, ಪಬ್ಲಿಕ್ ನೆಕ್ಸ್ಟ್
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
16/01/2025 07:40 pm