", "articleSection": "Politics", "image": { "@type": "ImageObject", "url": "https://prod.cdn.publicnext.com/s3fs-public/286525-1736870105-WhatsApp-Image-2025-01-14-at-9.24.56-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "MallikarunNaragunda" }, "editor": { "@type": "Person", "name": "shivuk" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಗದಗ: ಹಿಂದುಳಿದ ವರ್ಗಗಳ ಆರ್ಥಿಕ ಸ್ಥಿತಿ ಸುಧಾರಿಸುವ ಉದ್ದೇಶವಿಟ್ಟುಕೊಂಡು ಅವರ ಸ್ಥಿತಿ-ಗತಿ ಕುರಿತು ವೈಜ್ಞಾನಿಕ ಅಧ್ಯಯನ ನಡೆಸಿ, ಆ ವರ್ಗದ ಹಿತ...Read more" } ", "keywords": ",Gadag,Politics", "url": "https://publicnext.com/node" }
ಗದಗ: ಹಿಂದುಳಿದ ವರ್ಗಗಳ ಆರ್ಥಿಕ ಸ್ಥಿತಿ ಸುಧಾರಿಸುವ ಉದ್ದೇಶವಿಟ್ಟುಕೊಂಡು ಅವರ ಸ್ಥಿತಿ-ಗತಿ ಕುರಿತು ವೈಜ್ಞಾನಿಕ ಅಧ್ಯಯನ ನಡೆಸಿ, ಆ ವರ್ಗದ ಹಿತ ಕಾಪಾಡಲು ನಮ್ಮದೇನೂ ವಿರೋಧವಿಲ್ಲ. ಆದರೆ, ಅವೈಜ್ಞಾನಿಕವಾಗಿರುವ ಕಾಂತರಾಜು ವರದಿಯನ್ನು ಯಾವುದೇ ಕಾರಣಕ್ಕೂ ಬಿಡುಗಡೆ ಮಾಡಬಾರದು ಎಂದು ಮಾಜಿ ಸಚಿವ ಹಾಗೂ ನರಗುಂದ ಶಾಸಕರಾದ ಸಿ.ಸಿ. ಪಾಟೀಲ ಅವರು ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಕಳೆದ ಒಂದು ವಾರದಿಂದ ರಾಜ್ಯದ ಕಾಂಗ್ರೆಸ್‌ನಲ್ಲಿನ ಬೆಳವಣಿಗೆಗಳು ಕಳವಳಕಾರಿ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಕುರ್ಚಿ ಉಳಿಸಿಕೊಳ್ಳಲು ರಾಜ್ಯದ ಜನರ ಮನಸ್ಸನ್ನು ಬೇರೆಡೆ ತಿರುಗಿಸಲು ಮತ್ತೆ ಕಾಂತರಾಜು ವರದಿ ಬಹಿರಂಗಗೊಳಿಸುವ ಮಾತು ಆಡುತ್ತಿದ್ದಾರೆ.
ಇದು ಅವೈಜ್ಞಾನಿಕವಾಗಿದೆ. ಅದರಲ್ಲೂ ವೀರಶೈವ ಲಿಂಗಾಯತರು ಹಾಗೂ ಇನ್ನೊಂದು ಪ್ರಬಲ ಸಮುದಾಯವಾದ ಒಕ್ಕಲಿಗ ಸಮುದಾಯಕ್ಕೆ ತೀವ್ರ ಅನ್ಯಾಯವಾಗಲಿದೆ. ಅಷ್ಟೇ ಏಕೆ, ಈ ಬಗ್ಗೆ ಸ್ವತಃ ಶ್ಯಾಮನೂರು ಶಿವಶಂಕ್ರಪ್ಪನವರು, ಡಿ.ಕೆ. ಶಿವಕುಮಾರ್ ಅವರೂ ಸಹ ವಿರೋಧಿಸಿದ್ದಾರೆ.
ಕಾಂತರಾಜು ಆಯೋಗ ವರದಿ ಮನೆ-ಮನೆಗೆ ಹೋಗಿ ತಯಾರಿಸಿದ್ದಲ್ಲ. ಹವಾ ನಿಯಂತ್ರಿತ ಕೊಠಡಿಯಲ್ಲಿ ಕುಳಿತು ತಯಾರಿಸಿರುವುದಾಗಿದೆ. ಅಲ್ಲದೇ, ಈ ಜಾತಿವಾರು ಜನಗಣತಿ ವರದಿ ಸೋರಿಕೆಯಾಗಿ ಸಾಕಷ್ಟು ಗೊಂದಲಕ್ಕೆ ಎಡೆ ಮಾಡಿಕೊಟ್ಟಿದೆ. ಈ ವರದಿ ಒಪ್ಪಿಕೊಂಡರೆ ಗುಳೆ ಹೋದ ಲಕ್ಷಾಂತರ ಜನರಿಗೆ ತೀವ್ರ ಅನ್ಯಾಯವಾಗಲಿದೆ. ಕಾಂಗ್ರೆಸ್ ಪಕ್ಷದ ಶಾಸಕ-ಸಚಿವರು ಅಧಿಕಾರಕ್ಕೆ ಅಂಟಿಕೊಳ್ಳದೇ ಸಮಾಜದ ಹಿತದೃಷ್ಟಿಯಿಂದ ವಿರೋಧಿಸಬೇಕು ಎಂದು ಸಲಹೆ ನೀಡಿದರು.
ನರಗುಂದಕ್ಕೆ ಒಬ್ಬರು ಸೂಪರ್ ಎಂಎಲ್‌ಎ ಇದ್ದಾರೆ. ಅವರ ಪಕ್ಷ ಆಡಳಿತದಲ್ಲಿ ಇರುವುದರಿಂದ ಅಧಿಕಾರಿ ವರ್ಗ ಅವರ ಇಬ್ಬರು ಮಕ್ಕಳು, ಬಳಿಕ ಸೂಪರ್ ಎಂಎಲ್‌ಎ ಬಳಿ ಹೋಗುತ್ತಿದೆ ಎಂದು ಹಾಲಿ ಶಾಸಕನಾಗಿ ನಾನೇ ಹೇಳುತ್ತಿರುವುದಾಗಿ ಮಾಜಿ ಶಾಸಕ ಬಿ.ಆರ್. ಯಾವಗಲ್ ಅವರ ನಡೆಯ ವಿರುದ್ಧ ಕಿಡಿಕಾರಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರುಡಗಿ, ಮಾಜಿ ಅಧ್ಯಕ್ಷ ಎಂ.ಎಸ್. ಕರಿಗೌಡ್ರ, ಶ್ರೀಪತಿ ಉಡುಪಿ, ನಗರಸಭೆ ಸದಸ್ಯರಾದ ಪ್ರಕಾಶ ಅಂಗಡಿ, ಅನಿಲ ಅಬ್ಬಿಗೇರಿ, ಮುಖಂಡರಾದ ಶಿವರಾಜಗೌಡ ಹಿರೇಮನಿಪಾಟೀಲ, ಮಹಶ ದಾಸರ ಸೇರಿ ಹಲವರಿದ್ದರು.
PublicNext
14/01/2025 09:25 pm