ಸುಪ್ರಸಿದ್ಧ ಭಾವ ಗಾಯಕ ಪಿ.ಜಯಚಂದ್ರನ್ ಅವರು ಕನ್ನಡ, ಮಲಯಾಳಂ, ತಮಿಳು, ತೆಲುಗು ಮತ್ತು ಹಿಂದಿ ಭಾಷೆಯಲ್ಲಿ 16,000ಕ್ಕೂ ಹೆಚ್ಚು ಗೀತೆಗಳನ್ನು ಹಾಡಿದ್ದರು. ಈ ಮೂಲಕ ಭಾರತೀಯ ಸಂಗೀತ ಕ್ಷೇತ್ರಕ್ಕೆ ಅನನ್ಯ ಕೊಡುಗೆ ನೀಡಿದ್ದ ಇವರು ಬಹಳ ದಿನಗಳಿಂದ ಕ್ಯಾನ್ಸರ್ ಗೆ ಚಿಕಿತ್ಸೆ ಪಡೆಯುತ್ತಿದ್ದರು ಆದ್ರೆ ತಮ್ಮ 80 ನೇ ವಯಸ್ಸಿನಲ್ಲಿ ಗುರುವಾರ ತ್ರಿಶೂರ್‌ನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಭಾವ ಗಾಯಕರೆಂದೇ ಖ್ಯಾತಿ ಪಡೆದಿದ್ದ ಇವರು ಪ್ರೀತಿ, ಭಕ್ತಿಯ ಭಾವನೆಗಳನ್ನು ತುಂಬಿ ಅತ್ಯಂತ ಸೊಗಸಾಗಿ ಹಾಡುತ್ತಿದ್ದರು.
ಪಿ.ಜಯಚಂದ್ರನ್ ಹಾಡಿರುವ ಕನ್ನಡ ಸೂಪರ್ ಹಿಟ್ ಗೀತೆಗಳು:
ಹಿಂದೂಸ್ಥಾನವು ಎಂದೂ ಮರೆಯದ (ಅಮೃತ ಘಳಿಗೆ ಸಿನಿಮಾ)
ಮಂದಾರ ಪುಷ್ಪವು ನೀನು (ರಂಗನಾಯಕಿ)
ಕನ್ನಡ ನಾಡಿನ ಕರಾವಳಿ (ಮಸಣದ ಹೂವು)
ಕಾಲ್ಗೆಜ್ಜೆ ತಾಳಕ್ಕೆ (ಮುನಿಯನ ಮಾದರಿ)
ಚಂದ ಚಂದ (ಮಾನಸ ಸರೋವರ)
ಪ್ರೇಮದ ಶ್ರುತಿ ಮೀಟಿದೆ (ಗಣೇಶನ ಮದುವೆ)
ಜೀವನ ಸಂಜೀವನ (ಹಂತಕನ ಸಂಚು)
ರೆಬಲ್ ಸ್ಟಾರ್ ಅಂಬರೀಶ್ ಅವರ ಸೂಪರ್ ಹಿಟ್ ಹಾಡು ಒಲವಿನ ಉಡುಗೊರೆ ಕೊಡಲೇನು
ಭಕ್ತ ಪ್ರಹ್ಲಾದ ಸಿನಿಮಾದ ಕಮಲ ನಯನ ಸೇರಿದಂತೆ ಪಿ.ಜಯಚಂದ್ರನ್ ಹಾಡಿರುವ ಎಲ್ಲಾ ಹಾಡುಗಳು ಕೂಡ ಕನ್ನಡದಲ್ಲಿ ಸೂಪರ್ ಹಿಟ್ ಆಗಿವೆ
ಇನ್ನು ಪಿ.ಜಯಚಂದ್ರನ್ ಅವರ ಅಗಲಿಕೆ ಸಂಗೀತ ಕ್ಷೇತ್ರಕ್ಕೆ ತುಂಬಲಾರದ ನಷ್ಟವೇ ಸರಿ. ಸದ್ಯ ಇವರ ಅಗಲಿಕೆಗೆ ಅನೇಕರು ಕಂಬನಿ ಮಿಡಿದಿದ್ದಾರೆ. ಐಜಿಪಿ ಡಿ. ರೂಪಾ ಅವರು ಪಿ ಜಯಚಂದ್ರನ್ ಹಾಡಿರುವ
ಹಿಂದೂಸ್ಥಾನವು ಎಂದೂ ಮರೆಯದ ಹಾಡು ಹೇಳುವ ಮೂಲಕ ಪಿ.ಜಯಚಂದ್ರನ್ ಅವರ ಅನೇಕ ಹಾಡುಗಳ ಪೈಕಿ ನನ್ನ ಮೇಲೆ ಅತ್ಯಂತ ಪ್ರಭಾವ ಬೀರಿದ ಹಾಡು.. ಈ ಹಾಡಿನಂತೆ ಕರ್ನಾಟಕದ ಪ್ರತಿ ಮಗುವು ಭಾರತರತ್ನವಾಗಿ ಬೆಳೆಯಲಿ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ.
ಸದ್ಯ ಡಿ.ರೂಪಾ ಅವರು ಹಾಡಿದ ಹಾಡು ಎಲ್ಲೇಡೆ ವೈರಲ್ ಆಗುತ್ತಿದೆ.
PublicNext
12/01/2025 10:46 am