ಧಾರವಾಡ: ಮುಡಾ ಹಗರಣವನ್ನು ಲೋಕಾಯುಕ್ತ ಬಿಟ್ಟು ಸಿಬಿಐಗೆ ಕೊಡಬೇಕು ಎಂದು ಸ್ನೇಹಮಯಿ ಕೃಷ್ಣ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಧಾರವಾಡ ಹೈಕೋರ್ಟ್ ಜನವರಿ 27ಕ್ಕೆ ಮುಂದೂಡಿದೆ.
ಮುಡಾ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಸ್ನೇಹಮಯಿ ಕೃಷ್ಣ ಬೆಂಗಳೂರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಬೆಂಗಳೂರು ಹೈಕೋರ್ಟ್ ನ್ಯಾಯಮೂರ್ತಿಗಳು ಇಂದು ಧಾರವಾಡ ಹೈಕೋರ್ಟ್‌ನಲ್ಲಿ ಕರ್ತವ್ಯ ನಿರ್ವಹಿಸಿದ್ದರಿಂದ ಆ ಅರ್ಜಿ ವಿಚಾರಣೆ ಕೂಡ ಧಾರವಾಡ ಹೈಕೋರ್ಟ್‌ನಲ್ಲೇ ನಡೆಯಿತು.
ಸ್ನೇಹಮಯಿ ಕೃಷ್ಣ ಪರ ವಕೀಲರಾದ ಮಣಿಂದರ್ ಸಿಂಗ್ ಅವರು ವಾದ ಮಂಡಿಸಿದರು. ಮುಡಾ ಹಗರಣದ ಬಗ್ಗೆ ಮಣಿಂದರ್ ಸಿಂಗ್ ಅವರು ಎಳೆ ಎಳೆಯಾಗಿ ನ್ಯಾಯಾಲಯ ಮುಂದಿಟ್ಟರು. ಸಿಎಂ ಪರವಾಗಿ ಅಭಿಷೇಕ್ ಮನು ಸಿಂಘ್ವಿ ಕೂಡ ವಾದ ಮಂಡಿಸಿದರು.
ಸಿಬಿಐಗೆ ಈ ಪ್ರಕರಣವನ್ನು ಕೊಡಬಾರದು ಎಂದು ಸಿಎಂ ಪರ ವಕೀಲ ಅಭಿಷೇಕ ಮನು ಸಿಂಘ್ವಿ ವಾದ ಮಂಡಿಸಿದರು. ಇದಕ್ಕೆ ನ್ಯಾಯಮೂರ್ತಿಗಳು ನೀವು ಅದಕ್ಕೆ ಅಬ್ಜೆಕ್ಷನ್ ಹಾಕಿದ್ದೀರಾ ಎಂದು ಪ್ರಶ್ನಿಸಿದರು. ನೀವು ಏನು ವಾದ ಮಾಡಬೇಕೋ ಅದನ್ನು ಮಾಡಿ ನಾವು ಆರ್ಡರ್ ಪಾಸ್ ಮಾಡುತ್ತೇವೆ ಎಂದರು.
ಸುಮಾರು ಅರ್ಧ ಗಂಟೆಗಳ ಕಾಲ ವಾದ ಆಲಿಸಿದ ನ್ಯಾಯಮೂರ್ತಿಗಳು ಇದೇ ಜನವರಿ 27ಕ್ಕೆ ಪ್ರಕರಣದ ವಿಚಾರಣೆ ಮುಂದೂಡಿ ವಾದ-ಪ್ರತಿವಾದ ಮಾಡಲು ಅವಕಾಶ ಮಾಡಿಕೊಟ್ಟಿದೆ.
PublicNext
15/01/2025 11:21 am