", "articleSection": "Sports", "image": { "@type": "ImageObject", "url": "https://prod.cdn.publicnext.com/s3fs-public/41631820250111104034filescapture.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Divakar Siddapur" }, "editor": { "@type": "Person", "name": "7022522554" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಸಿದ್ದಾಪುರ: ತಾಲೂಕಿನ ಕಡಕೇರಿ ಶಾಲಾ ಮೈದಾನದಲ್ಲಿ ತಾಲೂಕು ಪತ್ರಕರ್ತರ ಸಂಘ ಹಾಗೂ ಮಾಧ್ಯಮ ಪ್ರತಿನಿಧಿಗಳ ಸಂಘದ ಸಂಯುಕ್ತ ಆಶ್ರಯದಲ್ಲಿ ತಾಲೂಕಿನ ...Read more" } ", "keywords": "Node,Uttara-Kannada,Sports", "url": "https://publicnext.com/node" } ಮಾನಸಿಕ ಒತ್ತಡ ಕಡಿಮೆ ಮಾಡಲು ಕ್ರೀಡೆ ಸಹಾಯಕಾರಿಯಾಗಿದೆ - ನ್ಯಾ. ಭರತ್ ಚಂದ್ರ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಾನಸಿಕ ಒತ್ತಡ ಕಡಿಮೆ ಮಾಡಲು ಕ್ರೀಡೆ ಸಹಾಯಕಾರಿಯಾಗಿದೆ - ನ್ಯಾ. ಭರತ್ ಚಂದ್ರ

 ಸಿದ್ದಾಪುರ: ತಾಲೂಕಿನ ಕಡಕೇರಿ ಶಾಲಾ ಮೈದಾನದಲ್ಲಿ ತಾಲೂಕು ಪತ್ರಕರ್ತರ ಸಂಘ ಹಾಗೂ ಮಾಧ್ಯಮ ಪ್ರತಿನಿಧಿಗಳ ಸಂಘದ ಸಂಯುಕ್ತ ಆಶ್ರಯದಲ್ಲಿ ತಾಲೂಕಿನ ವಿವಿಧ ಸರಕಾರಿ ಇಲಾಖೆಗಳ ಸಹಯೋಗದೊಂದಿಗೆ ಎರಡು ದಿನಗಳ ಸೌಹಾರ್ದ ಕ್ರಿಕೇಟ್ ಪಂದ್ಯಾವಳಿಗೆ ಶನಿವಾರ ಚಾಲನೆ ನೀಡಲಾಯಿತು.

ಕಾರ್ಯಕ್ರಮ ಕ್ಕೆ ಚಾಲನೆ ನೀಡಿದ ಸ್ಥಳೀಯ ನ್ಯಾಯಾಲಯದ ನ್ಯಾಯಾಧೀಶ ಭರತಚಂದ್ರ, ಕ್ರೀಡೆಗಳು ಮನುಷ್ಯನ ಚಟುವಟಿಕೆಯನ್ನು ಕ್ರೀಯಾಶೀಲವಾಗಿ ಇಡಲು ಅವಶ್ಯಕವಾಗಿರುತ್ತದೆ. ಸಾರ್ವಜನಿಕ ಜೀವನದಲ್ಲಿರುವ  ನೌಕರವೃಂದದವರು ಪರಸ್ಪರ ಇಲಾಖೆಗಳವರೊಂದಿಗೆ ಬೆರೆಯಲು, ಮಾನಸಿಕ ಒತ್ತಡವನ್ನು ನಿವಾರಿಸಿಕೊಳ್ಳಲು ಇಂತಹ ಚಟುವಟಿಕೆಯಲ್ಲಿ ಭಾಗವಹಿಸಬೇಕು.ಇಲ್ಲಿ ಸೋಲು- ಗೆಲುವ ಎರಡನ್ನು ಸಮಾನವಾಗಿ ಕಾಣಬೇಕು ಕ್ರೀಡೆಯಾಡುವುದು ಮಾತ್ರ ನಮ್ಮ ಉದ್ದೇಶವಾಗಬೇಕು ಎಂದು ಹೇಳಿದರು.

ಅಧ್ಯಕ್ಷತೆವಹಿಸಿದ್ದ ತಹಸೀಲ್ದಾರ ಮಧುಸೂಧನ ಕುಲಕರ್ಣಿ ಮಾತಾನಾಡಿ,ನಾನು ಬೇರೆ ಬೇರೆ ಕಡೆಯಲ್ಲಿ ಉದ್ಯೋಗ ಮಾಡಿದ್ದೆನೆ‌ ಆದರೆ ಎಲ್ಲೂ ಇಂತಹ ಪಂದ್ಯಾವಳಿಯನ್ನು ಪತ್ರಕರ್ತರು ನಡೆಸಿರುವುದು ಕಂಡುಬಂದಿಲ್ಲ.ಆದರೆ ನಮ್ಮ ತಾಲೂಕಿನ ಪತ್ರಕರ್ತರು ಎಲ್ಲಾ ಇಲಾಖೆಯವರನ್ನು ಸಮನ್ವಯಗೊಳಿಸಿ ಯಾವುದೇ  ಅಪೇಕ್ಷೆಯೂ ಇಲ್ಲದೆ ಉತ್ಸಾಹದಿಂದ ಕ್ರೀಡಾಕೂಟ ಆಯೋಜಿಸಿರುವುದು ಶ್ಲಾಘನೀಯವಾಗಿದೆ ಎಂದು ಹೇಳಿದರು.

ವೇದಿಕೆಯಲ್ಲಿ ಉಪಸ್ಥಿತರಿದ್ದ ಹೆಸ್ಕಾಂ ಅಧಿಕಾರಿ ನಾಗರಾಜ ಪಾಟೀಲ,ಕ್ಷೇತ್ರಶಿಕ್ಷಣಾಧಿಕಾರಿ ಎಂ.ಹೆಚ್.ನಾಯ್ಕ,ಅರಣ್ಯ ಇಲಾಖೆಯ ಮಹೇಶ ದೇವಾಡಿಗ ಮಾತನಾಡಿದರು.

ವೇದಿಕೆಯಲ್ಲಿ ಹೆಸ್ಕಾಂನ ರವಿ ನಾಯ್ಕ,ಮಾಧ್ಯಮ ಪ್ರತಿನಿಧಿಗಳ ಸಂಘದ ಅಧ್ಯಕ್ಷ ಕನ್ನೇಶ ಕೋಲಸಿರ್ಸಿ,ಉಪಾಧ್ಯಕ್ಷ ನಾಗರಾಜ ನಾಯ್ಕ ಮಾಳಕೋಡ,ಶಿಕ್ಷಣ ಇಲಾಖೆಯ ಎಂ.ಐ.ನಾಯ್ಕ ಮುಂತಾದವರು ಉಪಸ್ಥಿತರಿದ್ದರು.

ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಗಂಗಾಧರ ಹೆಗಡೆ ಕೊಳಗಿ ಪ್ರಾಸ್ತಾವಿಕ ಮಾತನಾಡಿದರು.

ನೇತ್ರಾ ನಾಗರಾಜ ಪಾಟೀಲ ಪ್ರಾರ್ಥನೆ ಹಾಡಿದರು‌

ಪತ್ರಕರ್ತ ಸುರೇಶ ಮಡಿವಾಳ ಕಡಕೇರಿ ಸ್ವಾಗತಿಸಿದರು.ಸುಜಯ ಭಟ್ಟ ವಂದನಾರ್ಪಣೆ ಮಾಡಿದರು ರಮೇಶ ಹೆಗಡೆ ಹಾರ್ಸಿಮನೆ ನಿರೂಪಣೆ ಮಾಡಿದರು

Edited By : PublicNext Desk
Kshetra Samachara

Kshetra Samachara

11/01/2025 10:40 pm

Cinque Terre

49.28 K

Cinque Terre

0