ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರಹ್ಮಾವರ: ಕೋಟ ವಿವೇಕ ಪದವಿ ಪೂರ್ವ ಕಾಲೇಜಿನ ಸೃಷ್ಟಿ ಪೂಜಾರಿಗೆ ಅಂತಾರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್‌ನಲ್ಲಿ ಎರಡು ಪ್ರಶಸ್ತಿ

ಬ್ರಹ್ಮಾವರ: ಕೋಟದ ವಿವೇಕ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಸೃಷ್ಟಿ ಎಸ್ .ಪೂಜಾರಿ ಕರಾಟೆ ಬುಡೋಕನ್ ಇಂಟರ್ ನ್ಯಾಷನಲ್ ಮುಕ್ತ ಚಾಂಪಿಯನ್ ಶಿಪ್ ನಲ್ಲಿ ಮೊದಲ ಮತ್ತು ದ್ವಿತೀಯ ಸ್ಥಾನ ಪಡೆದಿದ್ದಾಳೆ.

ಕುಮಿಟೆ ವಿಭಾಗದಲ್ಲಿ ಪ್ರಥಮ ಮತ್ತು ಕಟಾ ವಿಭಾಗದಲ್ಲಿ ದ್ವಿತೀಯ ಸ್ಥಾನ ಗಳಿಸುವುದರ ಮೂಲಕ ಕಾಲೇಜಿಗೆ ಹೆಮ್ಮೆ ತಂದಿದ್ದಾಳೆ.ಈ ಚಾಂಪಿಯನ್ ಶಿಪ್ ನ್ನು ಬೈಂದೂರಿನ ರೈನ್ ಬೋ ಬುಡೋಕನ್ ಕರಾಟೆ ಅಕಾಡೆಮಿ ಆಯೋಜನೆ ಮಾಡಿತ್ತು.ಇವರು ಬ್ರಹ್ಮಾವರದ ಸಂತೋಷ್ ಪೂಜಾರಿ ಮತ್ತು ಪುಷ್ಪಾ ದಂಪತಿಯ ಪುತ್ರಿ. ಸಂಸ್ಥೆಗೆ ಹೆಮ್ಮೆ ತಂದಿರುವ ವಿದ್ಯಾರ್ಥಿನಿಗೆ ಕೋಟ ವಿವೇಕ ಪದವಿ ಪೂರ್ವ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು ಮತ್ತು ಸಿಬ್ಬಂದಿ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

11/01/2025 09:45 pm

Cinque Terre

4.08 K

Cinque Terre

1

ಸಂಬಂಧಿತ ಸುದ್ದಿ