ಮಂಗಳೂರು: ಸರಕಾರಿ ಶಾಲೆಯ 9ನೇ ವಿದ್ಯಾರ್ಥಿಯೊಬ್ಬನು ಸಾಮಾನ್ಯ ಸೈಕಲ್ ಅನ್ನೇ ಇಲೆಕ್ಟ್ರಿಕ್ ಸೈಕಲಾಗಿ ಪರಿವರ್ತಿಸಿ ತನ್ನ ಕೈಚಳಕದಿಂದ ಎಲ್ಲರನ್ನೂ ನಿಬ್ಬೆರಗಾಗುವಂತೆ ಮಾಡಿದ್ದಾನೆ.
ದ.ಕ.ಜಿಲ್ಲೆಯ ಬಂಟ್ವಾಳದ ಕೆದಿಲ ಗ್ರಾಮದ ಲಿಂಗಪ್ಪ ನಾಯ್ಕ- ಆಶಾ ದಂಪತಿಯ ಪುತ್ರ, ಕಡೇಶ್ವಾಲ್ಯ ಸರಕಾರಿ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿ ಮೋಕ್ಷಿತ್ ನಾಯ್ಕ ಇಲೆಕ್ಟ್ರಿಕ್ ಸೈಕಲ್ ಆವಿಷ್ಕರಿಸಿದ ವಿದ್ಯಾರ್ಥಿ.
ಮೋಕ್ಷಿತ್‌ಗೆ ಶಾಲೆಗೆ ಹೋಗಲು ಹೆತ್ತವರು ಸೈಕಲ್ ಕೊಡಿಸಿದ್ದರು. ಮೋಕ್ಷಿತ್ ತನ್ನ ಸಾಮಾನ್ಯ ಸೈಕಲ್ ಅನ್ನು ಇಲೆಕ್ಟ್ರಿಕ್ ಸೈಕಲಾಗಿ ಪರಿವರ್ತಿಸುವುದು ಹೇಗೆ ಎಂಬುದನ್ನು ಯುಟ್ಯೂಬ್ ನೋಡಿ ಕಲಿತಿದ್ದ. ಇಲೆಕ್ಟ್ರಿಕ್ ಸೈಕಲ್ ತಯಾರಿಗೆ ಬೇಕಾದ ಎಕ್ಸಲೇಟರ್, ಬ್ರೇಕ್, ಬ್ಯಾಟರಿ, ಮೋಟಾರ್, ಪವರ್ ಬ್ಯಾಂಕ್‌ಗಳನ್ನು ಆನ್‌ಲೈನ್‌ನಲ್ಲಿ ಖರೀದಿಸಿದ್ದಾನೆ.
ಬಳಿಕ ಒಂದೊಂದೇ ಪಾರ್ಟ್ಸ್‌ಗಳನ್ನು ಜೋಡಿಸಿ, ಬ್ಯಾಟರಿ ಶಕ್ತಿಯಿಂದ ಸೈಕಲ್ ಚಲಿಸುವಂತೆ ಮಾಡಿದ್ದಾನೆ. ಈ ರೀತಿಯಲ್ಲಿ ಸೈಕಲ್ ಇಲೆಕ್ಟ್ರಿಕ್ ಆಗಿ ಪರಿವರ್ತಿಸಲು ಒಟ್ಟು 9 ಸಾವಿರ ರೂ. ವೆಚ್ಚ ಮಾಡಿದ್ದಾನೆ. ಎರಡು ದಿನಗಳಲ್ಲಿ ಸೈಕಲ್ ಇಲೆಕ್ಟ್ರಿಕ್ ಸೈಕಲ್ ಆಗಿ ಪರಿವರ್ತನೆಯಾಗಿದೆ. ಈತನ ಕೈಚಳಕಕ್ಕೆ ಈಗ ಎಲ್ಲರೂ ಶಹಬ್ಬಾಶ್ ಎನ್ನುತ್ತಿದ್ದಾರೆ.
PublicNext
11/01/2025 01:37 pm