ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಲಾರ : ವಿದ್ಯಾರ್ಥಿಗಳು ಕಾನೂನು ವಿದ್ಯಾಭ್ಯಾಸ ಓದಬೇಕು -ನ್ಯಾಯಾಧೀಶ ಜಿ.ಎ ಮಂಜುನಾಥ್

ಕೋಲಾರ : ಕಾನೂನು ವಿಧ್ಯಾಭ್ಯಾಸವನ್ನು ವಿಧ್ಯಾರ್ಥಿಗಳು ಸೀರಿಯಸ್ ಆಗಿ ತೆಗೆದುಕೊಂಡು ಓದಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಜಿ.ಎ ಮಂಜುನಾಥ್ ವಿಧ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ತಾಲ್ಲೂಕಿನ ಅರಹಳ್ಳಿ ಬಳಿ ಇರುವ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಶ್ರೀಮತಿ ವೆಂಕಟಮ್ಮ ವಿ.ಕೊಂಡಪ್ಪ ಚಾರಿಟಬಲ್ ಟ್ರಸ್ಟ್ ವತಿಯಿಂದ ನಿರ್ಮಾಣವಾಗಿರುವ ಸಭಾಂಗಣದ ವೇದಿಕೆಯನ್ನು ಉದ್ಘಾಟಿಸಿ ಮಾತನಾಡಿದರು.

ಇದೇ ಕಾಲೇಜಿನಲ್ಲಿ ಕಾನೂನು ಪದವಿ ಪಡೆದ ಪ್ರಶಾಂತ್ ವಿ.ಕೆ ಅವರು ತಾವು ಓದಿದ ಕಾಲೇಜಿಗೆ ಏನಾದರೂ ಕೊಡಗೆ ನೀಡಬೇಕು ಎಂಬ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ತಮ್ಮ ತಂದೆತಾಯಿ ಹೆಸರಲ್ಲಿ ಸಭಾಂಗಣಕ್ಕೆ ಗುಣಮಟ್ಟದ ವೇದಿಕೆ ಕಟ್ಟಿಸಿಕೊಟ್ಟಿದ್ದಾರೆ. ಕಟ್ಟಡಕ್ಕೆ ಬಣ ಬಳಿದು ಕೊಟ್ಟಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಹಲವು ಸಮಾಜಿಕ ಕಾರ್ಯಗಳನ್ನು ಮಾಡುತ್ತಿದ್ದಾರೆ, ನೀವು ಕೊಡ ಇದೇ ಕಟ್ಟಡದಲ್ಲಿ ಓದಿ ಬೆಳೆಯಬೇಕು, ಸಮಾಜಕ್ಕೆ ಮಾದರಿಯಾಗುವ ರೀತಿಯಲ್ಲಿ ಕೆಲಸ ನಿರ್ವಹಿಸಬೇಕು ಎಂದರು.

Edited By : PublicNext Desk
Kshetra Samachara

Kshetra Samachara

10/01/2025 07:25 pm

Cinque Terre

40

Cinque Terre

0

ಸಂಬಂಧಿತ ಸುದ್ದಿ