ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಲಾರ : ಮಕ್ಕಳ ಸಂವಿಧಾನ ಕ್ಲಬ್ ರಚಿಸುವ ಮೂಲಕ ಜವಾಬ್ದಾರಿತ ನಾಗರಿಕರನ್ನಾಗಿ ಮಕ್ಕಳನ್ನು ರೂಪಿಸಿ - ನ್ಯಾ. ಸುನಿಲ ಎಸ್ ಹೊಸಮನಿ

ಕೋಲಾರ : ವಿದ್ಯಾರ್ಥಿ ದೆಸೆಯಿಂದಲೇ ಮಕ್ಕಳಿಗೆ ಪ್ರಜಾತಂತ್ರ ವ್ಯವಸ್ಥೆ ಸಕ್ರಿಯ ನಾಗರಿಕತ್ವದ ಕುರಿತು ತರಬೇತಿ ನೀಡುವ ಮೂಲಕ ಸಮಾಜದ ಉತ್ತಮ ಪ್ರಜೆಗಳನ್ನಾಗಿ ರೂಪಿಸುವ ಜವಾಬ್ದಾರಿ ಸಮಾಜ ಶಿಕ್ಷಣ ಶಿಕ್ಷಕರ ಮೇಲಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ನ್ಯಾ.ಸುನಿಲ ಎಸ್ ಹೊಸಮನಿರವರು ತಿಳಿಸಿದರು.

ಕರ್ನಾಟಕ ವಸತಿ ಶಾಲೆಯ ಶಿಕ್ಷಕರ ಸಂಘ ಹಾಗೂ ಯಂಗ್ ಇಂಡಿಯಾ ಡೆವಲಪ್ಮೆಂಟ್ ಸೊಸೈಟಿಯ ಸಹಯೋಗದಲ್ಲಿ ಕೋಲಾರ ತಾಲೂಕಿನ ಪಾಶ್ರ್ವಗಾನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕೋಲಾರ ಜಿಲ್ಲೆಯ ಸಮಾಜ ವಿಜ್ಞಾನ ಶಿಕ್ಷಕರ ಎರಡು ದಿನಗಳ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಮಕ್ಕಳ ಸಂವಿಧಾನ ಕ್ಲಬ್ ಮೂಲಕ ಮಕ್ಕಳಲ್ಲಿ ಸಕ್ರಿಯ ನಾಗರಿಕತ್ವದ ಆಶಯಗಳನ್ನೂ ಜಾಗೃತಗೊಳಿಸಿ ನಾಗರೀಕ ಹಕ್ಕುಗಳು ಹಾಗೂ ಜವಾಬ್ದಾರಿ ಯನ್ನು ನೀತಿ ನಿರೂಪಣೆ ಯ ಮಾಹಿತಿಯನ್ನು ನೀಡಿ ಜವಾಬ್ದಾರಿ ಯುತ ನಾಗರೀಕರಾಗಿ ರೂಪಿಸುವುದಾಗಿದೆ. ಈ ನಿಟ್ಟಿನಲ್ಲಿ ಈ ಕಾರ್ಯಕ್ರಮವು ಬಹು ಮುಖ್ಯವಾಗಿದ್ದು, ಎಲ್ಲಾ ಶಿಕ್ಷಕರು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಬೇಕೆಂದು ಕರೆ ನೀಡಿದರು.

Edited By : PublicNext Desk
Kshetra Samachara

Kshetra Samachara

10/01/2025 07:08 pm

Cinque Terre

40

Cinque Terre

0

ಸಂಬಂಧಿತ ಸುದ್ದಿ