ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರಹ್ಮಾವರದಲ್ಲಿ ವಿಶೇಷಚೇತನ ವಿದ್ಯಾರ್ಥಿಗಳ ರಾಜ್ಯಮಟ್ಟದ ಕ್ರೀಡಾಕೂಟ

ಬ್ರಹ್ಮಾವರ: ಉಡುಪಿ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಛೇರಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬ್ರಹ್ಮಾವರ ಮತ್ತು ನಾನಾ ಸಂಘಸಂಸ್ಥೆ ಸಾರ್ವಜನಿಕರ ಸಹಭಾಗಿತ್ವದಲ್ಲಿ, ಬ್ರಹ್ಮಾವರ ಸರಕಾರಿಪದವಿ ಪೂರ್ವ ಕಾಲೇಜು ಮತ್ತು ಎಸ್ ಎಂ ಎಸ್ ಕಾಲೇಜು 2 ಕ್ರೀಡಾಂಗಣದಲ್ಲಿ ಜನವರಿ 11 ಮತ್ತು 12 ರಂದು ಏಕ ಕಾಲದಲ್ಲಿ ರಾಜ್ಯಮಟ್ಟದ ವಿಶೇಷ ಚೇತನ ವಿದ್ಯಾರ್ಥಿಗಳ ಕ್ರೀಡಾಕೂಟ2025 ಜರುಗಲಿದೆ ಎಂದು ಕ್ರೀಡಾಕೂಟ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಬಿರ್ತಿ ರಾಜೇಶ್ ಶೆಟ್ಟಿ ತಿಳಿಸಿದರು.

ರಾಜ್ಯದ 35 ಶೈಕ್ಷಣಿಕ ಜಿಲ್ಲೆಯಿಂದ 32 ಜಿಲ್ಲೆಯ 900 ವಿದ್ಯಾರ್ಥಿಗಳು ಮತ್ತು ಪೋಷಕರು, ಪ್ರತೀ ಜಿಲ್ಲಾಕ್ರೀಡಾಧಿಕಾರಿಗಳು 120 ದೈಹಿಕಶಿಕ್ಷಣ ಶಿಕ್ಷಕರು, 8 ಬಿ. ಐ. ಇ. ಆರ್. ಟಿ ಗಳು30 ಇತರ ಶಿಕ್ಷಕರು ಭಾಗವಹಿಸಲಿದ್ದಾರೆ.

11 ರಂದು ಸಂಜೆ ಗಂಟೆಗೆ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಕ್ರೀಡಾಕೂಟವನ್ನು ಉದ್ಘಾಟಿಸಲಿದ್ದು ನಾನಾ ಅತಿಥಿಗಣ್ಯರು ಭಾಗವಹಿಸಲಿದ್ದು 12 ರಂದು ಮಧ್ಯಾಹ್ನ 2 ಗಂಟೆಗೆ ಕ್ರೀಡಾಕೂಟ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಬಿರ್ತಿ ರಾಜೇಶ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಸಮಾರೋಪ ಮತ್ತು ಬಹುಮಾನ ವಿತರಣಾ ಕಾರ್ಯಕ್ರಮ ಜರುಗಲಿದೆ.

Edited By : PublicNext Desk
Kshetra Samachara

Kshetra Samachara

10/01/2025 06:30 pm

Cinque Terre

550

Cinque Terre

0

ಸಂಬಂಧಿತ ಸುದ್ದಿ