ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ ಧಾರವಾಡ ಬಂದ್: ಬೆಳ್ಳಂಬೆಳಿಗ್ಗೆಯೇ ಅಮಿತ್ ಶಾ ವಿರುದ್ಧ ಪ್ರತಿಭಟನೆಗಿಳಿದ ದಲಿತ ಸಂಘಟನೆಗಳು

ಹುಬ್ಬಳ್ಳಿ: ಸಂವಿಧಾನ ಶಿಲ್ಪಿ ಅಂಬೇಡ್ಕರ್ ಕುರಿತ ಅಮಿತ್ ಶಾ ಹೇಳಿಕೆಗೆ ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಆಕ್ರೋಶ ಭುಗಿಲೆದ್ದಿದೆ. ಅಮಿತ್ ಶಾ ಹೇಳಿಕೆ ಖಂಡಿಸಿ ಹುಬ್ಬಳ್ಳಿ-ಧಾರವಾಡ ಅವಳಿನಗರ ಬಂದ್ ಗೆ ಕರೆ ನೀಡಿರುವ ಬೆನ್ನಲ್ಲೇ ಬೆಳ್ಳಂಬೆಳಿಗ್ಗೆಯೇ ದಲಿತ ಸಂಘಟನೆಗಳು ರಸ್ತೆಗೆ ಇಳಿದು ಹೋರಾಟ ನಡೆಸುತ್ತಿವೆ.

ವಿವಿಧ ದಲಿತ ಸಂಘಟನೆಗಳು ಸೇರಿದಂತೆ 105 ಕ್ಕೂ ಅಧಿಕ‌ ಸಂಘಟನೆಗಳಿಂದ ಬಂದ್ ಗೆ ಕರೆ ನೀಡಿದ್ದು, ಈ ನಿಟ್ಟಿನಲ್ಲಿ ಅವಳಿನಗರದಲ್ಲಿ ಬೆಂಬಲ ವ್ಯಕ್ತವಾಗಿದ್ದು, ಗುರುನಾಥ ಉಳ್ಳಿಕಾಶಿ ನೇತೃತ್ವದಲ್ಲಿ ಅಮಿತ್ ಶಾ ಭಾವಚಿತ್ರ ಹಿಡಿದು ಪ್ರತಿಭಟನೆ ನಡೆಸಲಾಗುತ್ತಿದೆ‌.

ಅವಳಿ‌ನಗರ ಬಂದ್ ಗೆ ಹಲವು ಸಂಘಟನೆಗಳಿಂದ ವ್ಯಾಪಕ‌ ಬೆಂಬಲ ಸಿಕ್ಕಿದ್ದು, ಬೆಳಿಗ್ಗೆ 6 ರಿಂದ ಸಂಜೆ 6 ರವರೆಗೆ ಅವಳಿ ನಗರ ಸಂಪೂರ್ಣ ಬಂದ್ ಗೆ ಬೆಂಬಲ ನೀಡಿದೆ. ಒಂದೆಡೆ ದಲಿತ ಸಂಘಟನೆಗಳು‌ ಹಾಗೂ ಕಾಂಗ್ರೆಸ್ ನಿಂದ ಬಂದ್ ಗೆ ಬೆಂಬಲ ನೀಡಿದ್ದು, ಬಂದ್ ಕಾವು ಕೇಂದ್ರ ಸರ್ಕಾರಕ್ಕೆ ತಟ್ಟಲಿದೆಯಾ..? ಕಾದುನೋಡಬೇಕಿದೆ.

Edited By : Shivu K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

09/01/2025 07:28 am

Cinque Terre

133.97 K

Cinque Terre

3

ಸಂಬಂಧಿತ ಸುದ್ದಿ