ವಿಜಯಪುರ : ಜಿಲ್ಲೆಯ ಬಸವನಬಾಗೇವಾಡಿ ಪಟ್ಟಣದ ಪಿಎಲ್‌ಡಿ ಬ್ಯಾಂಕ್ ಚುನಾವಣೆಯಲ್ಲಿ ಈರಣ್ಣ ಚನ್ನಬಸಪ್ಪ ಪಟ್ಟಣಶೆಟ್ಟಿ ಗೆಲುವು ಸಾಧಿಸಿದ್ದಾರೆ.
ಇನ್ನೂ ಮಾನ್ಯ ಉಚ್ಚ ನ್ಯಾಯಾಲಯ ಕಲಬುರ್ಕಿ ಪೀಠ ಆದೇಶಕ್ಕೊಳಪಟ್ಟು ಮತದಾನ ಹಕ್ಕು ಪಡೆದ ಮತದಾರರು ಚಲಾಯಿಸಿದ ಮತಗಳನ್ನು ಹೊರತುಪಡಿಸಿ ಇನ್ನೂಳಿದ ಮತಗಳನ್ನ ಎಣಿಕೆ ಮಾಡಿ ಫಲಿತಾಂಶವನ್ನ ಘೋಷಿಸಲಾಗಿದೆ ಎಂದು ರಿಟರ್ನಿಂಗ್ ಆಫೀಸರ್ ಚೇತನ ಭಾವಿಕಟ್ಟಿ ತಿಳಿಸಿದರು.
ಈರಣ್ಣ ಚನ್ನಬಸಪ್ಪ ಪಟ್ಟಣಶೆಟ್ಟಿ 49 ಮತಗಳನ್ನ ಪಡೆದರೇ ಪ್ರತಿಸ್ಪರ್ಧಿ ಮಲ್ಲಪ್ಪ ಸಂಗಪ್ಪ ಹಾರಿವಾಳ 31 ಮತಗಳನ್ನ ಪಡೆದಿದ್ದಾರೆ.
ಬಾರಿ ಕುತೂಹಲ ಕೆರಳಿಸಿದ ಚುನಾವಣೆಯಲ್ಲಿ ಫಲಿತಾಂಶ ಹೊರಬಿಳುತ್ತಿದ್ದಂತೆ ಈರಣ್ಣ ಪಟ್ಟಣಶೆಟ್ಟಿ ಅವರ ಅಭಿಮಾನಿಗಳು, ಬೆಂಬಲಿಗರು ಪಟಾಕಿ ಸಿಡಿಸಿ ಪರಸ್ಪರ ಗುಲಾಲ ಎರಚಿ ಸಂಭ್ರಮಿಸಿದರು.
ಮಂಜು ಕಲಾಲ, ಪಬ್ಲಿಕ್ ನೆಕ್ಸ್ಟ ವಿಜಯಪುರ
Kshetra Samachara
07/01/2025 10:22 pm