ಬೆಂಗಳೂರು : ರಾಜ್ಯ ಕಾಂಗ್ರೆಸ್‌ನಲ್ಲಿ ಡಿನ್ನರ್ ಪಾಲಿಟಿಕ್ಸ್ ಫೈಟ್ ಜೋರಾಗಿ ನಡೆಯುತ್ತಿದೆ. ಸತೀಶ್ ಜಾರಕಿಹೊಳಿ ಬೆನ್ನಲ್ಲೇ ಪರಮೇಶ್ವರ್ ಡಿನ್ನರ್ ಪಾರ್ಟಿ ಏರ್ಪಡಿಸಿದ್ದರು. ಆದ್ರೆ ಇದಕ್ಕೆ ಡಿಕೆಶಿ ಗರಂ ಆಗಿದ್ದರು ಎನ್ನಲಾಗಿದೆ ರಾಜ್ಯದ ಕಾಂಗ್ರೆಸ್ ನಲ್ಲಿ ನಡೆಯುತ್ತಿರುವ ಡಿನ್ನರ್ ಪಾರ್ಟಿ ಬಗ್ಗೆ ದೆಹಲಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಗಮನಕ್ಕೆ ಡಿಕೆಶಿ ತಂದಿದ್ದಾರೆ. ಇಂದು ದೆಹಲಿ ಕಾಂಗ್ರೆಸ್ ಹೈಕಮಾಂಡ್ ನಾಯಕರ ಡಿಕೆಶಿ ಭೇಟಿಯಾಗಿ ಚರ್ಚೆ ನಡೆಸಿದ್ದರು.
ಈ ವೇಳೆ ರಾಜ್ಯದಲ್ಲಿನ ಕಾಂಗ್ರೆಸ್ ನಾಯಕರ ಡಿನ್ನರ್ ಪಾಲಿಟಿಕ್ಸ್ ಬಗ್ಗೆ ಹೈಕಮಾಂಡ್ ದೂರು ನೀಡಿದ್ದಾರೆ ಎನ್ನಲಾಗಿದೆ.
ಇದರ ಬೆನ್ನಲ್ಲೇ ಗೃಹ ಸಚಿವ ಪರಮೇಶ್ವರ್ ಅವರಿಗೆ ಹೈಕಮಾಂಡ್ ನಾಳೆಯ ಔತಣಕೂಟ ಮುಂದೂಡಿಕೆ ಮಾಡಿ ಎಂದು ಸೂಚಿಸಿದೆ. ಹೈಕಮಾಂಡ್ ಸೂಚನೆ ಹಿನ್ನೆಲೆಯಲ್ಲಿ ಗೃಹ ಸಚಿವ ಡಾ.ಜಿ ಪರಮೇಶ್ವರ್ ಕರೆದಿದ್ದ ಔತಣಕೂಟ ಮುಂದೂಡಿಕೆ ಮಾಡಿದ್ದಾರೆ.
ನಾಳೆ ರಾತ್ರಿ ದಲಿತ, ಸಚಿವರು, ಶಾಸಕರು, ಸಂಸದರು, ಮುಖಂಡರಿಗೆ ಕರೆದಿದ್ದ ಔತಣಕೂಟಕ್ಕೆ ಅಹ್ವಾನಿಸಿದ್ದ ಪರಮೇಶ್ವರ್, ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಸೂಚನೆ ಹಿನ್ನೆಲೆಯಲ್ಲಿ ಡಿನ್ನರ್ ಪಾರ್ಟಿ ಮುಂದೂಡಿಕೆ ಮಾಡಲಾಗದೆ ಎಂದು ಅಧೀಕೃತವಾಗಿ ಪರಮೇಶ್ವರ್ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಒಟ್ಟಾರೆ ರಾಜ್ಯ ಕಾಂಗ್ರೆಸ್ ನಲ್ಲಿ ಡಿನ್ನರ್ ಪಾಲಿಟಿಕ್ಸ್ ತಲ್ಲಣ ಸೃಷ್ಟಿಸಿದೆ ಅನ್ನೋದಂತೂ ಸತ್ಯ . ಡಿನ್ನರ್ ಪಾಲಿಟಿಕ್ಸ್ ಗೆ ಹೈಕಮಾಂಡ್ ನಿಂದ ಡಿಕೆಶಿ ಬ್ರೇಕ್ ಹಾಕಿಸಿದ್ರಾ? ಪಕ್ಷದಲ್ಲಿ ಮುಂದೆ ಏನೆಲ್ಲಾ ಬೆಳವಣಿಗೆ ಆಗುತ್ತೆ ಕಾದುನೋಡಬೇಕಿದೆ.
PublicNext
07/01/2025 06:47 pm