ತುಮಕೂರು: ಟ್ರಾಕ್ಟರ್ ಟ್ರೈಲರ್ ಗೆ ಬೈಕ್ ಗುದ್ದಿದ ಪರಿಣಾಮ ಒಂದೇ ಕುಟುಂಬದ ಮೂವರು ಮೃತಪಟ್ಟಿರುವ ಘಟನೆ ತುಮಕೂರು ತಾಲ್ಲೂಕು ಕೋರ ಹೋಬಳಿ ಓಬಳಾಪುರ ಗೇಟ್ ಬಳಿ ಇಂದು ನಸುಕಿನಲ್ಲಿ ನಡೆದಿದೆ.
ಟ್ರಾಕ್ಟರ್ ಹಿಂಬದಿಯ ಟ್ರೈಲರ್ ಗೆ ಗುದ್ದಿದ ಬೈಕ್ ಗುದ್ದಿದ ರಭಸಕ್ಕೆ ಮಧುಗಿರಿ ತಾ ಗುಡ್ಡೇನಹಳ್ಳಿ ಮೂಲದ ಮಹಮದ್ ಆಸೀಫ್(12), ಮಮ್ತಾಜ್ (38), ಶಾಖೀರ್ ಹುಸೇನ್(48) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ
ಘಟನಾ ಸ್ಥಳಕ್ಕೆ ಎಸ್‌ಪಿ ಅಶೋಕ್ ವೆಂಕಟ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೋರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
PublicNext
07/01/2025 09:13 am