ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರಹ್ಮಾವರ: ಹನೆಹಳ್ಳಿಯಲ್ಲಿ ನಾಗದೇವರಿಗೆ ಆಶ್ಲೇಷಾ ಬಲಿ ಸೇವೆ, ಢಕ್ಕೆ ಬಲಿ

ಬ್ರಹ್ಮಾವರ: ಬಾರಕೂರು ಹನೆಹಳ್ಳಿ ಹೊಳೆಹೊದ್ದಿನ ಮನೆಯ ಬಳಿ ಇರುವ ಬ್ರಹ್ಮಸ್ಥಾನ, ನಾಗದೇವರು ಮತ್ತು ಪರಿವಾರ ದೇವರ ದೇವಸ್ಥಾನದಲ್ಲಿ ಶುಕ್ರವಾರ ಮತ್ತು ಶನಿವಾರ ವೇದಮೂರ್ತಿ ರಮೇಶ್ ಭಟ್ಟ ನಾಯರಬೆಟ್ಟು ಮತ್ತು ಜಯರಾಮ ಅಡಿಗ ಬಂಡೀಮಠ ನೇತೃತ್ವದಲ್ಲಿ ನಾನಾ ಧಾರ್ಮಿಕ ಕಾರ್ಯಕ್ರಮದೊಂದಿಗೆ ವಾರ್ಷಿಕ ಪೂಜಾ ಮಹೋತ್ಸವ ಜರುಗಿತು.

ಶ್ರೀ ನಾಗದೇವರ ಪುನರ್ ಪ್ರತಿಷ್ಠೆ, ಢಕ್ಕೆ ಬಲಿ, ಆಶ್ಲೇಷಾ ಬಲಿ ಸೇವೆ, ಬ್ರಹ್ಮ ದೇವರಿಗೆ ರಜತ ಮುಖವಾಡ ಸಮರ್ಪಣೆ ಅಂಗವಾಗಿ ಬಿಂಬ ಪ್ರತಿಷ್ಠೆ, ಕಲಾತತ್ವ ಕಲಶ ಸ್ಥಾಪನೆ, ತತ್ವ ಹೋಮ, ಕಲಶಾಭಿಷೇಕ ಜರುಗಿತು. ಇದೇ ಸಂದರ್ಭದಲ್ಲಿ ನಾಗದೇವರಿಗೆ ಹಾಲಿಟ್ಟು ಸೇವೆ, ನಾಗದರ್ಶನ ಮತ್ತು ತುಲಾಭಾರ ಸೇವೆ ಜರುಗಿತು.

ಮುಖವಾಡ ಕೊಡುಗೆ ನೀಡಿದ ಆಡಳಿತ ಮಂಡಳಿಯ ಅಧ್ಯಕ್ಷ ರಾಜೀವ ಶೆಟ್ಟಿ ಮತ್ತು ಗುಲಾಬಿ ಆರ್. ಶೆಟ್ಟಿ ಹೊಳೆಹೊದ್ದಿನ ಮನೆ, ಖಜಾಂಚಿ ಸುರೇಶ್ ಭಂಡಾರಿ ನೇತೃತ್ವ ವಹಿಸಿದ್ದರು. ನಾನಾ ಸೇವಾಕರ್ತರು ಪರಿಸರದ ಸಹಸ್ರಾರು ಮಂದಿ ಉತ್ಸವ ಮತ್ತು ಅನ್ನ ಸಂತರ್ಪಣೆಯಲ್ಲಿ ಭಾಗವಹಿಸಿದ್ದರು.

Edited By : Ashok M
Kshetra Samachara

Kshetra Samachara

06/01/2025 05:04 pm

Cinque Terre

7.17 K

Cinque Terre

0

ಸಂಬಂಧಿತ ಸುದ್ದಿ