ಕರೆಂಟ್ ತೆಹೆದಯಲು ಬಂದ ಲೈನ್‌ಮ್ಯಾನ್‌ಗೆ ಮಹಿಳೆಯೊಬ್ಬರುಕಂಬವನ್ನೇರಿ ಅವಾಸ್ ಹಾಕಿದ್ದಾರೆ. ಹೌದು ಕರೆಂಟ್ ಬಿಲ್ ಸರಿಯಾಗಿ ಪಾವತಿಸದ ಕಾರಣ ಲೈನ್‌ಮ್ಯಾನ್ ವಿದ್ಯುತ್ ಕಡಿತಗೊಳಿಸಲು ಮುಂದಾದಾಗ ಆತನ ಹಿಂದೆಯೇ ದೊಣ್ಣೆ ಹಿಡಿದು ಕಂಬವನ್ನೇರಿದ ಮಹಿಳೆ ಅವಾಜ್ ಹಾಕಿ ಆತನನ್ನು ಕಂಬದಿಂದ ಕೆಳಗಿಳಿಸಿದ್ದಾರೆ. ಈ ಕುರಿತ ವಿಡಿಯೋವೊಂದು ಇದೀಗ ಸಖತ್ ವೈರಲ್ ಆಗುತ್ತಿದೆ.
ಮಹಿಳೆಯ ಭಂಡ ಧೈರ್ಯವನ್ನು ಕಂಡು ನೆಟ್ಟಿಗರು ಬೆರಗಾಗಿದ್ದಾರೆ.
ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯಲ್ಲಿ ಈ ಅಚ್ಚರಿಯ ಪ್ರಕರಣ ನಡೆದಿದ್ದು, Gharkakalesh ಹೆಸರಿನ ಎಕ್ಸ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಆದ್ರೂ ದೊಣ್ಣೆ ಹಿಡಿದು ಕರೆಂಟ್ ಕಂಬವನ್ನೇರಿ ಲೈನ್‌ಮ್ಯಾನ್‌ಗೆ ಕರೆಂಟ್ ತೆಗೆದ್ರೆ ಜಾಗ್ರತೆ ಎಂದು ಮಹಿಳೆ ಧಮ್ಕಿ ಹಾಕುತ್ತಿರುವ ನಿಜಕ್ಕೂ ಶಾಕಿಂಗ್ ಆಗಿದೆ.
PublicNext
03/01/2025 03:24 pm