ಕೋಲ್ಕತ್ತಾ: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರ ಆಪ್ತ ಸಹಾಯಕ ಬಾಬ್ಲಾ ಸರ್ಕಾರ್ ಅವರಿಗೆ ನಾಲ್ವರು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.
ಪಶ್ಚಿಮ ಬಂಗಾಳದ ಮಾಲ್ಡಾನ ಜಲ್ಟಾಲಿಯಾ ಪ್ರದೇಶದಲ್ಲಿ ಗುರುವಾರ ಬೆಳಗ್ಗೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಕೌನ್ಸಿಲರ್ ದುಲಾಲ್ ಸರ್ಕಾರ್ ಅವರನ್ನು ಅಪರಿಚಿತ ದುಷ್ಕರ್ಮಿಗಳು ಬೈಕ್‌ನಲ್ಲಿ ಬಂದು ಕೃತ್ಯ ಎಸಗಿ ಪರಾರಿಯಾಗಿದ್ದಾರೆ. ಈ ಘಟನೆಯು ಸ್ಥಳದಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇಬ್ಬರು ದುಷ್ಕರ್ಮಿಗಳು ಸರ್ಕಾರ್ ಕಚೇರಿಯೊಳಗೆ ನುಗ್ಗಿ ಅನೇಕ ಬಾರಿ ಗುಂಡು ಹಾರಿಸುವುದು ವಿಡಿಯೋದಲ್ಲಿ ಕಾಣಬಹುದು.
ಒಂದು ಗುಂಡು ಮಾಲ್ಟಾ ಕೌನ್ಸಿಲರ್‌ನ ತಲೆಗೆ ತಗುಲಿದರೆ, ಇನ್ನೆರಡು ದೇಹದ ಇತರೆ ಭಾಗಕ್ಕೆ ತಗುಲಿದೆ. ಕೂಡಲೇ ದುಲಾಲ್ ಸರ್ಕಾರ್ ಅವರನ್ನು ಮಾಲ್ಟಾ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಲಾಗಿದೆ.
ಈ ಬೆನ್ನಲ್ಲೇ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಮಮತಾ ಬ್ಯಾನರ್ಜಿ ಅವರು, "ನನ್ನ ನಿಕಟವರ್ತಿ ಮತ್ತು ಅತ್ಯಂತ ಜನಪ್ರಿಯ ನಾಯಕ, ಬಾಬ್ಲಾ ಸರ್ಕಾರ್ ಇಂದು ಕೊಲೆಯಾಗಿದ್ದಾರೆ. ತೃಣಮೂಲ ಕಾಂಗ್ರೆಸ್ ಆರಂಭದಿಂದಲೂ ಅವರು (ಮತ್ತು ಅವರ ಪತ್ನಿ ಚೈತಾಲಿ ಸರ್ಕಾರ್) ಪಕ್ಷಕ್ಕಾಗಿ ಶ್ರಮಿಸಿದರು. ಬಾಬ್ಲಾ ಕೌನ್ಸಿಲರ್ ಆಗಿ ಆಯ್ಕೆಯಾದರು" ಎಂದು ತಿಳಿಸಿದ್ದಾರೆ.
PublicNext
03/01/2025 08:55 am